ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆಯಿಂದ ಹನುಮದ್ ವ್ರತ

Rashmi Kasaragodu
Updated On : 14 Dec 2013, 10:51 am

ರಾಯಚೂರು: ತಾಲೂಕಿನ ಕಾಡ್ಲೂರು ಗ್ರಾಮದಲ್ಲಿ ಶ್ರೀಪ್ರಾಣದೇವರ ಹಾಗೂ ವನವಾಸಿ ಶ್ರೀರಾಮದೇವರ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಡಿ.15ರಿಂದ 17ರವರೆಗೆ ಹನುಮದ್ ವ್ರತ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಹನುಮದ್ ವ್ರತ ಕಾರ್ಯಕ್ರಮಗಳು ಶ್ರೀ ಗುರುರಾಜಾಚಾರ್ ಜೋಷಿ ನೇತೃತ್ವದಲ್ಲಿ ಜರುಗಲಿದ್ದು, ದಿನವೂ ಬೆಳಗ್ಗೆ ಸುಪ್ರಭಾತ, ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾ ಮಂಗಳಾರತಿ, ಹನುಮದ್ ವ್ರತ ಕಥೆ ಶ್ರವಣ, ನೈವೇದ್ಯ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಕಾಡ್ಲೂರು ಸಂಸ್ಥಾನದ ಧರ್ಮಾಧ್ಯಕ್ಷ ರಾಘವೇಂದ್ರರಾವ್ ದೇಸಾಯಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
ವಾಹನ ಪಲ್ಟಿ; 10 ಮಂದಿಗೆ ಗಾಯ
ರಾಯಚೂರು; ದೇವದುರ್ಗ ತಾಲೂಕಿನ ಕೋತಿಗುಡ್ಡ ಬಳಿ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ 10 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಭೀಮಪ್ಪ ಮತ್ತಿತರೆ 9 ಜನರೆಂದು ಗುರುತಿಸಲಾಗಿದೆ. ಇವರು ಟಾಟಾ ಮ್ಯಾಜಿಕ್ ವಾಹನದಲ್ಲಿ ಸಾಗುತ್ತಿದ್ದ ವೇಳೆ ಚಾಲಕ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ್ದರಿಂದ ಅದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಪ್ರಯಾಣಿಕರು ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement