ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ; ಹಾವು ಕಚ್ಚಿ ಬಾಲಕನ ಸಾವು

Rashmi Kasaragodu
Updated On : 14 Dec 2013, 10:44 am

ರಾಯಚೂರು: ಮಂತ್ರಾಲಯದಲ್ಲಿ ಶುಕ್ರವಾರ ಬೆಳಗ್ಗೆ ರಾಯರ ದರ್ಶನಕ್ಕೆ ಬಂದಿದ್ದ ಬಾಲಕನಿಗೆ ಹಾವು ಕಚ್ಚಿ ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಗುರುದತ್ತ(4) ಎಂದು ಗುರುತಿಸಲಾಗಿದೆ. ಬಾಲಕ ತನ್ನ ಪಾಲಕರೊಂದಿಗೆ ಮಂತ್ರಾಲಯದ ಶ್ರೀರಾಯರ ದರ್ಶನಕ್ಕೆ ಆಗಮಿಸಿದ್ದ ವೇಳೆ ಶ್ರೀಮಠದ ಪ್ರಾಕಾರದಲ್ಲಿ ಆಟವಾಡುತ್ತಿದ್ದಾಗ ಮರೆಯಲ್ಲಿ ಅಡಗಿದ್ದ ಹಾವು ಕಚ್ಚಿದೆ. ಅದರಿಂದ ಅಸ್ವಸ್ಥಗೊಂಡ ಬಾಲಕನನ್ನು ಎಮ್ಮಿಗನೂರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆಂದು ಹೇಳಲಾಗಿದೆ. ಕಳೆದ ಮೂರು ದಿನಗಳಿಂದ ಶ್ರೀಮಠದಲ್ಲಿ ಹಾವು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದು, ಆಡಳಿತದ ಅಧಿಕಾರಿಗಳು ಅದರ ಬಗ್ಗೆ ಹೆಚ್ಚಿನ ಗಮನ ಹರಿಸದಿರುವುದು ಘಟನೆಗೆ ದಾರಿ ಮಾಡಿತೆಂದು ಆರೋಪಿಸಲಾಗಿದೆ. ಎಚ್ಚೆತ್ತ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಭಕ್ತರ ಪ್ರವೇಶ ತಡೆದು ಹಾವಿಗಾಗಿ ವ್ಯರ್ಥ ಹುಡುಕಾಟ ನಡೆಸಿದರೆಂದು ತಿಳಿದುಬಂದಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement