ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿವಿಧ ತರಬೇತಿಗೆ ಅರ್ಜಿ

Rashmi Kasaragodu
Updated On : 14 Dec 2013, 10:51 am

ರಾಯಚೂರು: ಕೈಗಾರಿಕೆ ವಾಣಿಜ್ಯ ಇಲಾಖೆಯಿಂದ ಕಂಪ್ಯೂಟರ್, ಹೊಲಿಗೆ, ಟಿ.ವಿ. ಮತ್ತು ರೆಡಿಯೋ, ಎಲೆಕ್ಟ್ರಿಕಲ್ ಹೋಮ್ ಅಪ್ಲಾಯನ್ಸಸ್ಗಳಲ್ಲಿ ಮೂರು ತಿಂಗಳ ತರಬೇತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತರು 18ರಿಂದ 35 ವರ್ಷ ವಯಸ್ಸಿನವರಾಗಿದ್ದು, ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ತರಬೇತಿ ಅವಧಿಯಲ್ಲಿ ಮಾಸಿಕ 500 ರು. ಶಿಷ್ಯವೇತನ ನೀಡಲಾಗುವುದು. ರಾಯಚೂರು ತಾಲೂಕಿನ ಅಭ್ಯರ್ಥಿಗಳ ಸಂದರ್ಶನವನ್ನು ಡಿ.23ರಂದು ಮಧ್ಯಾಹ್ನ 12ಕ್ಕೆ ಹೈದರಾಬಾದ್ ರಸ್ತೆಯಲ್ಲಿರುವ ಕೈಗಾರಿಕಾ ಇಲಾಖೆಯಲ್ಲಿ ನಡೆಸಲಾಗುತ್ತಿದೆ. ಮಾನವಿ ತಾಲೂಕಿನ ಅಭ್ಯರ್ಥಿಗಳಿಗೆ ಡಿ.26ರಂದು ಮಾನವಿಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ, ಸಿಂಧನೂರು ತಾಲೂಕಿನವರಿಗೆ ಡಿ.27ರಂದು ತಾಪಂ ಕಚೇರಿಯಲ್ಲಿ ಹಾಗೂ ಲಿಂಗಸ್ಗೂರು ತಾಲೂಕಿನವರಿಗೆ ಡಿ.28ರಂದು ಕೈಗಾರಿಕೆ ವಿಸ್ತರಣಾಧಿಕಾರಿಗಳ ಕಚೇರಿ ಎಪಿಎಂಸಿ ಎದುರಿಗೆ ಸಂದರ್ಶನ ಆಯೋಜಿಸಲಾಗಿದೆ. ಅರ್ಜಿಗಳನ್ನು ಡಿ.21ರೊಳಗೆ ಸಲ್ಲಿಸಬೇಕು. ಸಂದರ್ಶನ ವೇಳೆಯಲ್ಲಿ ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕೆಂದು ಉಪ ನಿರ್ದೇಶಕರು ಕೈಗಾರಿಕೆ ಇಲಾಖೆ ರಾಯಚೂರು ತಿಳಿಸಿದ್ದಾರೆ.
19ರಂದು ತಾಪಂ ಸಭೆ
ರಾಯಚೂರು: ರಾಯಚೂರು ತಾಪಂ 11ನೇ ಸಾಮಾನ್ಯ ಸಭೆ ಡಿ.19ರಂದು ಕರೆಯಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ತಾಪಂ ಸಭಾಂಗಣದಲ್ಲಿ ಅಧ್ಯಕ್ಷ ಪಿ. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement