ವೀರಭದ್ರೇಶ್ವರ ಕಾರ್ತೀಕೋತ್ಸವ
ಸಿಂಧನೂರು: ಹಳೇ ಬಜಾರದಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತೀಕೋತ್ಸವವು ಅದ್ಧೂರಿಯಿಂದ ಜರುಗಿತು. ಬೆಳಗಿನ ಜಾವ ವೀರಭದ್ರೇಶ್ವರರ ಮೂರ್ತಿಗೆ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕಾರ್ತೀಕೋತ್ಸವದ ಅಂಗವಾಗಿ ಮಹಿಳೆಯರಿಂದ ಕುಂಭ, ವೀರಗಾಸೆ ನೃತ್ಯ, ಕಳಸ ಮತ್ತು ಪುರವಂತಿಕೆ ಹಾಗೂ ವಿವಿಧ ವಾದ್ಯಗಳಿಂದ ಮೆರವಣಿಗೆಯು ಜರುಗಿತು. ಚಂದ್ರಮೌಳೇಶ್ವರ ದೇವಸ್ಥಾನದ ಮಾಜಿ ಅಧ್ಯಕ್ಷ ಶಿವಕುಮಾರಸ್ವಾಮಿ, ಉಪಾಧ್ಯಕ್ಷ ಶಿವಕುಮಾರ ಜವಳಿ, ಖಜಾಂಚಿ ವೀರೇಶ ಅಂತರಗಂಗಿ, ನಗರಸಭೆ ಮಾಜಿ ಅಧ್ಯಕ್ಷ ಶರಣಪ್ಪ ತೆಂಗಿನಕಾಯಿ, ಸದಸ್ಯರಾದ ಚಂದ್ರು ಮೈಲಾರ, ಶರಣಯ್ಯಸ್ವಾಮಿ, ಅರ್ಚಕ ಅಮರಯ್ಯಸ್ವಾಮಿ ಅಲಬನೂರು, ವೀರಭದ್ರಯ್ಯ, ಅಮರೇಶ, ಎಸ್. ಶರಣೇಗೌಡ, ಶರಣಬಸವ ಗೊರೇಬಾಳ, ಶಿವು ಜವಳಿ ಇದ್ದರು.