ಅಕ್ರಮ ಮರಳು ಸಾಗಣೆ: ಮೂರು ಟ್ರ್ಯಾಕ್ಟರ್ ಜಪ್ತಿ
ಮುದಗಲ್: ಅಕ್ರಮವಾಗಿ ಮರಳು(ಉಸುಕು) ಸಾಗಿಸುತ್ತಿದ್ದ ಮೂರು ಟ್ರ್ಯಾಕ್ಟರ್ಗಳನ್ನು ಲಿಂಗಸ್ಗೂರು ತಹಸೀಲ್ದಾರ್ ಮಹಾಜನ್ ಜಪ್ತಿ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮೇದಕಿನಾಳ ಗ್ರಾಮದ ಪಕ್ಕದಲ್ಲಿರುವ ಹಿರೇ ಹಳ್ಳದ ಮರಳು (ಉಸುಕು)ನ್ನು ಖಾಸಗಿ ಟ್ಯಾಕ್ಟರಿ ವಾಹನಗಳಲ್ಲಿ ತುಂಬಿಕೊಂಡು ಮನೆ ಕಟ್ಟುವರಿಗೆ ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ವಿಷಯ ತಿಳಿದ ತಹಸೀಲ್ದಾರರು ವಾಹನಗಳನ್ನು ಜಪ್ತಿ ಮಾಡಿ ಮುದಗಲ್ ಪೊಲೀಸ್ ವಶಕ್ಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ. ಮೂರು ಟ್ರ್ಯಾಕ್ಟರ್ ವಾಹನಗಳ ಚಾಲಕರು ಮತ್ತು ಮಾಲೀಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಎಸ್ಐ ಸಂಗಮೇಶ ಶಿವಯೋಗಿ ತಿಳಿಸಿದ್ದಾರೆ. ವಾಹನಗಳ ಚಾಲಕರನ್ನು ಬಂಧಿಸಲಾಗಿದೆ.