ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಡಲೆಗೆ ಕೀಟ ಬಾಧೆ; ರೈತರಲ್ಲಿ ಆತಂಕ

Mainashree
Updated On : 15 Dec 2013, 10:29 am

ಕ.ಪ್ರ. ವಾರ್ತೆ  ಮುದಗಲ್  ಡಿ.14
ರೈತನಿಗೆ ಒಂದಲ್ಲ ಒಂದು ಸಮಸ್ಯೆ ಎದುರಾದರೂ ಎದೆಗುಂದದೇ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಧೈರ್ಯ ಅನ್ನದಾತನದು. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಬೆಳೆದ ಕಡಲೆ ಬೆಳೆಗೆ ಕೀಟಬಾಧೆ ಇರುವುದರಿಂದ ರೈತರು ಅತಂಕಗೊಂಡಿದ್ದಾರೆ.
ಕೀಟ ಬಾಧೆಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಕ್ರಿಮಿನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ. ಉತ್ತಮ ಮಳೆ ಹೊಂದಿದ್ದ ರೈತ ವರ್ಗಕ್ಕೆ ಈ ಬಾರಿ ಅತ್ಯುತ್ತಮ ಫಸಲು ಸಿಗುವ ನಿರಿಕ್ಷೆಯಲ್ಲಿ ಇರುವಾಗಲೇ ಕಡಲೆ ಬೆಳೆಗೆ ಕೀಟ ಬಾಧೆ ಅಂಟಿಕೊಂಡಿದೆ.
ರೈತರಿಗೆ ಸಲಹೆ: ಕಡಲೆ ಬೆಳೆ ಕಾಯಿ ಕಟ್ಟುವ ಹಂತದಲ್ಲಿರುವಾಗಲೇ ಕೀಟ ಬಾಧೆಯಿಂದ ತೊಂದರೆ ಅನುಭವಿಸುತ್ತಿರುವ ರೈತರು ಕೂಡಲೇ ಒಂದು ಲೀಟರ್ ನೀರನಲ್ಲಿ ಎರಡು ಎಂ.ಎಲ್. ಕ್ಲೋರೋ ಪೈರಿಪಾ ಕ್ರೀಮಿನಾಶಕವನ್ನು ಸಿಂಪರಣೆ ಮಾಡಬೇಕು.
ಎರಡನೇ ಹಂತದಲ್ಲಿ ಒಂದು ಎಕರೆ ಕಡಲೇ ಬೆಳೆಗೆ 30 ಎಂ.ಎಲ್. ಕೋರೋಜಿನ್ ಕ್ರೀಮಿನಾಶಕವನ್ನು ಸಿಂಪರಣೆ ಮಾಡುವುದರಿಂದ ಕೀಟ ಬಾಧೆ ನಿಯಂತ್ರಣಕ್ಕೆ ಬರುತ್ತದೆ. ಕಾಯಿ ರಸ ಹೀರುವಿಕೆ ತಡೆಗಟ್ಟಬಹುದಾಗಿದೆ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ರಾಮಚಂದ್ರಪ್ಪ ರಾಠೋಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement