ಇಂದಿನಿಂದ ಜಾತ್ರ
ದೇವದುರ್ಗ: ತಾಲೂಕಿನ ಧರ್ಮಾನಾಯಕ ತಾಂಡಾ (ಸಾಸ್ವಿಗೇರಾ)ದಲ್ಲಿ ಶ್ರೀಸತ್ಯತಾಯಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.16 ಮತ್ತು 17ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿ.16ರಂದು ಗಂಗಾಸ್ಥಳಕ್ಕೆ ಹೋಗುವುದು, 17ರಂದು ಎಲೆಪೂಜೆ, ಗಣಾರಾಧನೆ ಹಾಗೂ ರಾತ್ರಿ ಭಜನೆ, ಬೆಳಗಿನ ಜಾವ ಡೊಳ್ಳಿನ ನೃತ್ಯ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮಹಾರಾಷ್ಟ್ರದ ಸಿದ್ದು ಪೂಜಾರಿ, ತಿಪ್ಪಣ್ಣ ಪೂಜಾರಿ, ಗ್ಯಾನಪ್ಪ ಪೂಜಾರಿ, ತುಕಾರಾಮ ಪೂಜಾರಿ ಇವರ ನೇತೃದಲ್ಲಿ ನಡೆಯಲಿವೆ.
ದಸಂಸಕ್ಕೆ ನೇಮಕ
ದೇವದುರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ)) ವಿದ್ಯಾರ್ಥಿ ಘಟಕದ ತಾಲೂಕು ಸಂಚಾಲಕರಾಗಿ ಹನುಮಂತ ಗಾಣಧಾಳ ನೇಮಕಗೊಂಡಿದ್ದಾರೆ.
ಈ ಕುರಿತು ತಾಲೂಕು ಸಂಚಾಲಕ ಶಿವಪ್ಪ ಪಲ್ಕನಮರಡಿ ಆದೇಶ ಹೊರಡಿಸಿದ್ದು, ಅದೇ ರೀತಿ ಸಂಘಟನಾ ಸಂಚಾಲಕರಾಗಿ ಶಿವರಾಜ ವಂದಲಿ, ತಿರುಮಲ ಕಕ್ಕಲದೊಡ್ಡಿ, ಅಮರೇಶ ದೇವರಮನಿ, ಪ್ರಕಾಶ ಹೇರೂರು, ಖಜಾಂಚಿಯಾಗಿ ಚನ್ನಬಸವ ಕೊಪ್ಪರ ಅವರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.