ಪ್ರತಿಭೆ ಗುರ್ತಿಸಲು ಪ್ರತಿಭಾ ಕಾರಂಜಿ ವೇದಿಕೆ
ಸಿಂಧನೂರು: ತಾಲೂಕಿನ ಉದ್ಭಾಳ (ಯು) ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಗೌಡನಬಾವಿ ವಲಯಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.
ಎಪಿಎಂಸಿ ಮಾಜಿ ನಿರ್ದೇಶಕ ಶೇಖರಪ್ಪ ಮೇಟಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.
ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪ್ರಸನ್ನ ಪಾಟೀಲ್ ಮಸ್ಕಿ ಮಾತನಾಡಿ, ಶಿಕ್ಷಕರು ಪಾಠದ ಜೊತೆಗೆ ನೈತಿಕ ಶಿಕ್ಷಣ ಬೋಧಿಸಬೇಕು, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿ ಪೋಷಕರಿಗೆ ಮತ್ತು ಶಿಕ್ಷಕರಿಗೆ ಕೀರ್ತಿ ತರುವಂತೆ ಕರೆ ನೀಡಿದರು.
ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಅಜಯಕುಮಾರ ನಾಡಗೌಡ, ಮುಖಂಡ ಶಂಕರರಾವ್ ಕುಲಕರ್ಣಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ನಾಗೋಜಪ್ಪ, ಉಪಾಧ್ಯಕ್ಷ ಬಸಮ್ಮ, ಶರಣಪ್ಪ ಅಂಗಡಿ, ವೀರಭದ್ರಪ್ಪ ಜಲ್ಲಿ, ಕಂಠೆಪ್ಪ ನಾಯಕ, ಕೆ.ಶಿವಣ್ಣ, ಚಿಟ್ಟಿಬಾಬು ದುರ್ಗಾಕ್ಯಾಂಪ್, ಡಾ.ಎಸ್.ಎಸ್.ಜಾಗೀರದಾರ ಬಳಗಾನೂರ, ಗುರಪ್ಪ ಗೌಡನಬಾವಿ, ಅಮರೇಶ ಕಡಾಮುಡಿಮಠ, ಸಿ.ಆರ್.ಪಿ. ಅಧಿಕಾರಿಗಳಾದ ವೆಂಕನಗೌಡ ಪಾಟೀಲ್, ಶಂಕ್ರಯ್ಯ ಹಿರೇಮಠ, ಮುಖ್ಯಗುರು ಬಸವರಾಜ, ಶಿವರಾಜ ಕಡಬೂರ ಉಪಸ್ಥಿತರಿದ್ದರು. ಶಿಕ್ಷಕ ಉದಯಕುಮಾರ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ನಿರೂಪಿಸಿದರು. ಮಂಜುನಾಥ ವಂದಿಸಿದರು.