ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಆ್ಯಂಬುಲೆನ್ಸ್‌ಗೆ ಶಾಸಕರಿಂದ ಚಾಲನೆ

Lingaraj Badiger
Updated On : 17 Dec 2013, 11:15 am

ಕ.ಪ್ರ. ವಾರ್ತೆ, ದೇವದುರ್ಗ್ಣ ಡಿ.16
ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳ ಪರಿಹಾರಕ್ಕೆ ನೆರವಾಗಲು ಹಾಗೂ ತುರ್ತು ಸಂದರ್ಭದಲ್ಲಿ ರೋಗಿಗಳ ಸಾಗಣೆಗೆ ಅನುಕೂಲವಾಗಲೆಂದು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮಂಜೂರು ಮಾಡಲಾಗಿದೆ ಎಂದು ಶಾಸಕ ವೆಂಕಟೇಶ ನಾಯಕ ಹೇಳಿದರು.
ಅವರು ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ 8.50 ಲಕ್ಷ ವೆಚ್ಚದಲ್ಲಿ ಮಂಜೂರಾದ ನೂತನ ಆ್ಯಂಬ್ಯುಲೆನ್ ವಾಹನದ ಕೀಲಿ ಹಸ್ತಾಂತರಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆ ಮತ್ತು ವೈದ್ಯಕೀಯ ಉಪಕರಣಗಳ ಮಾಹಿತಿಯಿದೆ. ಹೈ.ಕ. ಭಾಗದಲ್ಲಿ 371ನೇ ಕಲಂ ಜಾರಿಯ ಹಿನ್ನೆಲೆಯಲ್ಲಿ ನೇಮಕಾತಿ ತಡವಾಗಿದೆ. ಶೀಘ್ರ ವೈದ್ಯರ ಮತ್ತು ಸಿಬ್ಬಂದಿಗಳ ನೇಮಕ ಮಾಡಲಾಗುವುದೆಂದು ಭರವಸೆ ನೀಡಿದರು. ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯಕ್ಬಾಲಸಾಬ ಹೌದುಡಿ, ಬಾಪೂಗೌಡ ಚಿಕ್ಕ ಹೊನ್ನಕುಣಿ, ಮಹಿಳಾ ಘಟಕದ ಅಧ್ಯಕ್ಷೆ ಕರೆಮ್ಮ, ಫಜಲುಲ್ಲಾ ಸಾಜೀದ್, ಮುಖಂಡರಾದ ಹುಸೇನಸಾಬ ನೀಲವಂಜಿ,ಶ್ಯಾಮಸುಂದರ ಅಬಕಾರಿ, ಡಾ. ಸುಭಾಷಚಂದ್ರ ಪಾಟೀಲ್, ತಾಲೂಕು ಯುವ ಅಧ್ಯಕ್ಷ ಶೇಖ್ ಮುನ್ನಭಾಯ್ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement