ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಮಜೀನಾಯ್ಕ ತಾಂಡಾ; ಕುಡಿವ ನೀರಿನ ಸಮಸ್ಯೆ ಪರಿಶೀಲನೆ

Lingaraj Badiger
Updated On : 17 Dec 2013, 11:11 am

ಮುದಗಲ್: ಸಮೀಪದ ಛತ್ತರ ರಾಮಜೀನಾಯ್ಕ ತಾಂಡಾದಲ್ಲಿ ಹಲವು ದಿನಗಳಿಂದ ಉಲ್ಬಣಗೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತು ಗಮನ ಹರಿಸಿದ ನಾಗಲಾಪುರ ಗ್ರಾ.ಪಂ. ಅಧಿಕಾರಿಗಳು ತಾಂಡಾಕ್ಕೆ ಭೇಟಿ ಕೊಟ್ಟು ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿದರು.
ತಾಂಡಾಕ್ಕೆ ಆರಂಭದಲ್ಲಿ ಲಿಂಬಪ್ಪನ ತಾಂಡಾದ ಹಳ್ಳದ ಬೋರ್‌ವೆಲ್‌ನಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತಿತ್ತು. ನಂತರದಲ್ಲಿ 2007-08ರಲ್ಲಿ ಜಿ.ಪಂ. ಅನುದಾನದಲ್ಲಿ ಹೊಸ ಬೋರ್‌ವೆಲ್ ಕೊರೆಯಿಸಿ ನೀರು ಸರಬರಾಜು ಮಾಡಲಾಯಿತು. ಆದರೆ ಈ ಯೋಜನೆ ಕೈ ಕೊಟ್ಟಿದ್ದರಿಂದ ಮತ್ತೆ ಲಿಂಬಪ್ಪನ ತಾಂಡಾದ ಹಳ್ಳದ ಬೋರಿನಿಂದ ನೀರು ಪೂರೈಸಲಾಗುತ್ತಿದೆ.
ಆದರೆ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ, ನೀರು ಸಂಗ್ರಹ ಗುಮ್ಮಿಗಳು ಸಹ ಅಳವಡಿಸಿಲ್ಲ ಎಂದು ತಾಂಡಾ ನಿವಾಸಿಗಳು ಪಿಡಿಒ ಚನ್ನಮಲ್ಲಯ್ಯ ಸ್ವಾಮಿ ಎದರುರಿಗೆ ತಮ್ಮ ನೋವು ತೋಡಿಕೊಂಡರು. ಸಮಸ್ಯೆ ಆಲಿಸಿದ ಪಿಡಿಒ ಕಳೆದ ಸಾಲಿನಿಂದಲೂ ತಾಂಡಾಕ್ಕೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬೇಸಿಗೆ ಆರಂಭದ ಮುನ್ನ ಹೊಸ ಬೋರ್‌ವೆಲ್ ಕೊರೆಯಿಸಿ ನೀರು ನೀಡುವ ಭರವಸೆ ನೀಡಿದರು. ಗ್ರಾ.ಪಂ. ಸದಸ್ಯ ವಿಜಯ ಇಲಕಲ್ಲ, ನೀರುಪಾದಿ, ಹನುಮಂತ, ದುರುಗಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement