'ಶಹರ್ ರೋಜಗಾರ್' ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ
ಸಿಂಧನೂರು: ನಗರದಲ್ಲಿ ಸೋಮವಾರ ಸಿಡಿಸಿ ಕಾರ್ಯಾಲಯದಲ್ಲಿ ಸ್ವರ್ಣ ಜಯಂತಿ ಶಹರ್ ರೋಜಗಾರ್ ಯೋಜನೆಯ ನೂತನ ಅಧ್ಯಕ್ಷ, ಶ್ರೀದೇವಿ ಶ್ರೀನಿವಾಸ ಉಪಾಧ್ಯಕ್ಷೆ ಅನುಸೂಯಾ ಅಮರಗುಂಡಪ್ಪ ಪದಗ್ರಹಣ ಮಾಡಿದರು. ನಂತರ ಅಧ್ಯಕ್ಷೆ ಶ್ರೀದೇವಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ನಗರಸಭಾಧ್ಯಕ್ಷ ಜಾಫರ ಅಲಿ ಜಾಹಗೀರದಾರ, ಉಪಾಧ್ಯಕ್ಷೆ ಲಕ್ಷ್ಮೀ ರಮೇಶ, ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, ಯೋಜನೆಯ ಸಮುದಾಯ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷೆ ಕಮಲಾಬಾಯಿ, ನಗರಸಭಾ ಸದಸ್ಯೆರಾದ ಸುಮಂಗಲಾ ಮಲ್ಲಿಕಾರ್ಜುನಗೌಡ ಗುಂಜಳ್ಳಿ, ಹುಸೇನ್ನಬಿ, ಕೌಸರ್ ಬೇಗಂ, ಮುಬಾರಕ್ ಬೇಗಂ, ಚಂದ್ರಕಲಾ, ದುರುಗಪ್ಪ ಹಸಮಕಲ್, ಸಂಚಾಲಕಿಯರಾದ ಬಷೀರ್ ಬೇಗಂ, ನಾಗರತ್ನ, ಖಾದರಬೀ, ಪದ್ಮಾವತಿ, ನೇತ್ರಾವತಿ, ಬೀಬಿ, ಜಬೀನ್ ಅಂಜುಂ, ಮೌಲಾಬಿ, ಭಾಗ್ಯಶ್ರೀ, ವಾಣಿ, ಶಬನಾ ಬೇಗಂ ಇತರರು ಇದ್ದರು.