ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಕಾಮ್ ಮಾಂಗೋ'ಕ್ಕೆ ಚಾಲನೆ

Lingaraj Badiger
Updated On : 18 Dec 2013, 11:10 am

ದೇವದುರ್ಗ: ಉದ್ಯೋಗ ಖಾತ್ರಿ ಯೋಜನೆಯಡಿ ಕಾಮ್ ಮಾಂಗೋ ಅಭಿಯಾನವನ್ನು ಡಿ.12ರಿಂದ ತಾಲೂಕಿನಲ್ಲಿ ಆರಂಭಿಸಲಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿಗೆ ಅನುಕೂಲವಾಗಲಿದೆ ಎಂದು ಜಿಪಂ ಸಿಇಒ ಡಾ. ಮುದ್ದುಮೋಹನ್ ತಿಳಿಸಿದರು.
ಅವರು ಸೋಮವಾರ ಸಂಜೆ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಮ್ ಮಾಂಗೋ ಅಭಿಯಾನಕ್ಕೆ ಕೆಲ ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದೆ. ಉದ್ಯೋಗ ಚೀಟಿಗಾಗಿ 861 ಅರ್ಜಿ ಬಂದಿವೆ. ಕೆಲಸಕ್ಕಾಗಿ ಕೋರಿ 466 ಕುಟುಂಬಗಳು ಅರ್ಜಿ ಸಲ್ಲಿಸಿವೆ. ಅವರಿಗೆ 15 ದಿನದಲ್ಲಿ ಕೆಲಸ ನೀಡಲಾಗುತ್ತದೆ ಎಂದು ತಿಳಿಸಿದರು.
ತನಿಖೆಗೆ ಒತ್ತಾಯ: ತಾಲೂಕಿನ ಪಲ್ಕನಮರಡಿ ಗ್ರಾಪಂನಲ್ಲಿ ವಸತಿ ಯೋಜನೆ ಅಡಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಹಣ ನೀಡಬೇಕು. ಹಣ ನೀಡಲು ಹಿಂದೇಟು ಹಾಕಿದರೆ ಗ್ರಾಪಂ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸುವುದಾಗಿ ಗ್ರಾಪಂ ಸದಸ್ಯ ಶಿವರಾಜ ಊಟಿ ಎಚ್ಚರಿಸಿದರು. ಪಲ್ಕನಮರಡಿ ಗ್ರಾಪಂನ ಮಾಜಿ ಅಧ್ಯಕ್ಷ ಹನ್ಮಗೌಡ ಮದರಕಲ್ ಅವರ ಅವಧಿಯಲ್ಲಿ ವಸತಿ ಯೋಜನೆ ಅಡಿ 1.40 ಕೋಟಿ ಅಕ್ರಮ ನಡೆದಿದ್ದು, ದಾಖಲೆ ಸಹಿತ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಗುರುಗುಂಟಾ ಗ್ರಾಪಂನಲ್ಲಿ ನೋಂದಣಿ
ಲಿಂಗಸ್ಗೂರು: ತಾಲೂಕಿನ ಗುರುಗುಂಟಾ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಗುರುಬಸವ ನಾಯಕ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆಯಲ್ಲಿ ಕಾಮ್ ಮಾಂಗೋ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಸಭೆಯಲ್ಲಿ 2013-14 ನೇ ಸಾಲಿನ ಇಂದಿರಾ ಆವಾಸ್, ಬಸವ ವಸತಿ ಮನೆಗಳ ಆಯ್ಕೆಗೆ ಫಲಾಭವಿಗಳಿಂದ ಅರ್ಜಿ ಸ್ವೀಕರಿಸಲಾಯಿತು. 2014-15 ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ವಾರ್ಡುಗಳಲ್ಲಿ ರಸ್ತೆ, ಚರಂಡಿ, ಭೂ ಅಭಿವೃದ್ಧಿ, ದನದ ಕೊಟ್ಟಿಗೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಲಿಸಲು ಕ್ರಿಯಾ ಯೋಜನೆ ರೂಪಿಸಲು ನಿರ್ಧರಿಸಲಾಯಿತು ಹಾಗೂ ಕೂಲಿ-ಕಾರ್ಮಿಕರಿಂದ ಅರ್ಜಿ ಪಡೆಯಲಾಯಿತು. ಸಭೆ ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿ ನಜೀರ್ ಸಾಬ್ ಗ್ರಾಮದ ಅಂಬೇಡ್ಕರ್ ಕಾಲೋನಿಯ ಮನೆಗಳಿಗೆ ಭೇಟಿ ನೀಡಿ ಯೋಜನೆಯಡಿ ಕೆಲಸಕ್ಕೆ ಅರ್ಜಿ ಹಾಕುವಂತೆ ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರಾಜಾ ಸೋಮನಾಥ ನಾಯಕ, ಉಪಾಧ್ಯಕ್ಷ ವಾಸುದೇವ ನಾಯಕ, ತಾಪಂ ಸದಸ್ಯ ಬಸವರಾಜ ನಾಯಕ ದೊಡ್ಡಹೊಲ, ಸದಸ್ಯರಾದ ಗಜೇಂದ್ರ ನಾಯಕ, ಅಮರೇಶ ಸ್ವಾಮಿ, ಬಾಬು ದಿಡ್ಡಿಮನಿ, ಅಮರೇಶ ಗುತ್ತೇದಾರ, ರಮೇಶ ಹೂಗಾರ, ಶೇಖರಪ್ಪ ದೊಡ್ಡಮನಿ, ಯಲ್ಲಪ್ಪ ಕಬ್ಬೇರ, ಗ್ರಾಪಂ ಸಿಬ್ಬಂದಿ ಮಹ್ಮದ್ ಗೌಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement