ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಳಗಾನೂರು ಶಾಲೆಗೆ ಎಸ್ಡಿಎಂಸಿ ರಚನೆ

Lingaraj Badiger
Updated On : 18 Dec 2013, 11:07 am

ಸಿಂಧನೂರು: ಬಳಗಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಈರಪ್ಪ ಮೂಳದಿನ್ನಿ ಉಪಾಧ್ಯಕ್ಷರಾಗಿ ಮೌಲಾಬಿ ಖಾಜಾ ಬಂದೇನವಾಜ ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ಮಂಗಳವಾರ ಜರುಗಿದ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸೇರಿದಂತೆ 13 ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಗ್ರಾಪಂ ಸದಸ್ಯ ಹನುಮಂತಪ್ಪ ಗೋಡಿಕಾರ, ಮಾಜಿ ಸದಸ್ಯರಾದ ಪಾಂಡುರಂಗಪ್ಪ ಕಟ್ಟಿಮನಿ, ಡಾ. ಜಾಗೀರ್ದಾರ್, ಮುಖಂಡರಾದ ನಾಗಬಸಪ್ಪ ನಾಮದೇವ, ನಾಗರಾಜ ಪೊ.ಪಾ., ಯಲ್ಲಪ್ಪ ಭಜಂತ್ರಿ ವಿದ್ಯಾಥಿಗಳ ಪಾಲಕ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮಿತಿ ಸದಸ್ಯರಾಗಿ ಅಮರೇಶ ಕಾರಲಕುಂಟಿ, ನಾಗರಾಜ ಲೋಕ್ರೆ, ಯಂಕನಗೌಡ ಗದ್ದಿ, ರಡ್ಡೆಪ್ಪ ಭೀಮರಾಯಪ್ಪ, ಶರಣಪ್ಪ ಕುಂಬಾರ, ಶಿವಪ್ಪ ಛಲವಾದಿ, ಹನುಮಮ್ಮ ಕಂಠೆಪ್ಪ, ಪಾರ್ವತೆಮ್ಮ ಮಲ್ಲಪ್ಪ, ವಿಜಯಲಕ್ಮೀ ಜವಳಗೇರಾ, ರೇಣುಕಮ್ಮ ಗುಳ್ಳಪ್ಪ, ಸಿದ್ದಮ್ಮ ಬುನಾದಿ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯಗುರು ಮಲ್ಲಮ್ಮ ಕೆ. ತಿಳಿಸಿದರು.
ನಿಗಮದ ಕಚೇರಿ ಸ್ಥಳಾಂತರ
ರಾಯಚೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ರಾಯಚೂರು ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ನಿಗಮದ ಕಚೇರಿಯು ಪ್ರಕಟಣೆ ನೀಡಿ, ನಗರದ ಕೆಇಬಿ ಕಾಲನಿ ರಸ್ತೆಯ ಸಿಟಿ ಕ್ಲಬ್ ಹತ್ತಿರದ ಮನೆ ಸಂಖ್ಯೆ 1-11-89/88, ರಾಘವೆಂದ್ರ ಕಾಲನಿ, ರಾಯಚೂರು ವಿಳಾಸಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಿಗಮ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement