ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಲಾರಿ- ಕಾರು ಡಿಕ್ಕಿ: ಇಬ್ಬರ ಸಾವು

Lingaraj Badiger
Updated On : 18 Dec 2013, 11:10 am

ಮುದಗಲ್: ಲಾರಿ, ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಧ್ಯಪ್ರದೇಶ ಮೂಲದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಸಾವಿಗೀಡಾದ ಘಟನೆ ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಜರುಗಿದೆ.
ಮೃತರನ್ನು ರಾಜೇಂದ್ರ ಸಿಂಗ್, ಅಕಿಲೇಶ ಎಂದು ಗುರುತಿಸಲಾಗಿದ್ದು, ಇವರು ಮಧ್ಯಪ್ರದೇಶದ ಬೆನಕಂಪಾಡಿ ಗ್ರಾಮದರೆನ್ನಲಾಗಿದೆ. ಲಿಂಗಸ್ಗೂರು ಕಡೆಯಿಂದ ಬಾಗಲಕೋಟೆ ಕಡೆಗೆ ಹೊರಟಿದ್ದ ಮಧ್ಯಪ್ರದೇಶ ಮೂಲದ ಕಾರು ಮತ್ತು ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಹೊರಟಿದ್ದ ಐಸರ್ ಲಾರಿ ವೇಗವಾಗಿ ಪರಸ್ಪರ ಎದುರಿನಿಂದ ಬಂದು ಡಿಕ್ಕಿಯಾಗಿದ್ದು, ಲಾರಿ, ಕಾರು ವೇಗದ ಒಡೆತಕ್ಕೆ ಇಬ್ಬರು ಸತ್ತಿದ್ದಾರೆ.
ತರುಣ ಮತ್ತು ಅರುಣ ಎನ್ನುವ ಇಬ್ಬರಿಗೆ ತೀವ್ರ  ಗಾಯಗಳಾಗಿವೆ. ಮಹಿಳೆ ನಾಲಿಗೆ ಕತ್ತರಿಸಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿಗೆ ಸಾಗಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲಿನರ್ಗೆ ಯಾವುದೇ ಗಾಯಗಳಾಗಿಲ್ಲ. ರಸ್ತೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಮಸ್ಕಿ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್ಐ ಸಂಗಮೇಶ ಶಿವಯೋಗಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಸಾಹಸ: ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಸಾವನ್ನಪ್ಪಿದ ಶವಗಳನ್ನು ಹೊರ ತೆಗೆಯಲು ಪೊಲೀಸರು ಹರಸಹಾಸ ಮಾಡಿದರು. ರಕ್ತಸಿಕ್ತ ಶವಗಳನ್ನು ಹೊರತೆಗೆದು ಶವ ಪರೀಕ್ಷೆಗೆ ಲಿಂಗಸ್ಗೂರು ಆರೋಗ್ಯ ಕೇಂದ್ರಕ್ಕೆ ಕಳಿಸಲಾಗಿದೆ. ರಸ್ತೆ ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು ವಾಹನವನ್ನು ಮುದಗಲ್  ಪೊಲೀಸ್ ಠಾಣೆಗೆ ತರಲಾಗಿದ್ದು ಲಾರಿ ಕ್ಲಿನರ್ ಪೊಲೀಸ್ ವಶದಲ್ಲಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement