ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

Mainashree
Updated On : 19 Dec 2013, 11:15 am

ಸಿಂಧನೂರು: ಬಸವರಾಜೇಶ್ವರಿ ಕ್ಯಾಂಪಿನ ಇಂದಿರಾ ನಗರದಲ್ಲಿ ಅಗತ್ಯವಿರುವ ಕುಡಿಯುವ ನೀರಿನ ಕೆರೆ ನಿರ್ಮಾಣಕ್ಕೆ ಭೂಮಿ ಖರೀದಿಗೆ ಶೀಘ್ರವೇ ಹಣ ಮಂಜೂರಾತಿಗೆ ಪ್ರಯತ್ನಿಸುವುದಾಗಿ ಜಿಪಂ ಸದಸ್ಯೆ ಇಂದ್ರಮ್ಮ ಮಲ್ಲನಗೌಡ ಕನ್ನಾರಿ ಹೇಳಿದರು.
ತಾಲೂಕಿನ ಅಲಬನೂರಲ್ಲಿ ಬುಧವಾರ ಗ್ರಾಪಂ.ನ ಗ್ರಾಮ ಸ್ವರಾಜ್ ಯೋಜನೆಯಡಿ 5.19 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇಂದಿರಾನಗರವು ಬಹಳ ಬೆಳವಣಿಗೆಯಾಗಿದ್ದು, ಈಗಿರುವ ಕುಡಿಯುವ ನೀರಿನ ಕೆರೆ ಸಾಕಾಗುವುದಿಲ್ಲ. ಹೊಸ ಕೆರೆ ನಿರ್ಮಾಣದ ಅಗತ್ಯವಿದೆ. ಇದಕ್ಕಾಗಿ ಭೂಮಿ ಖರೀದಿ ಮಾಡಬೇಕು. ಈ ಬಗ್ಗೆ ಜಿಪಂ.ಗೆ ಪ್ರಸ್ತಾವನೆ ಸಲ್ಲಿಸಿ, ಹಣ ಮಂಜೂರು ಮಾಡಿಸಲಾಗುವುದು. ಖರೀದಿಗೆ ಇನ್ನೂ ಅಗತ್ಯ ಬಿದ್ದರೆ ಜನತೆ ಹಾಕಿಕೊಳ್ಳಲು ಸಿದ್ಧರಾಗಿದ್ದು, ಸಂತೋಷದ ವಿಷಯವಾಗಿದೆ. ಇಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳ ಅಗತ್ಯವಿದೆ. ಈ ಬಗ್ಗೆ ಜೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಕನ್ನಾರಿ, ಮುದುಕಪ್ಪ ಬೆಳಗುರ್ಕಿ, ಅಲಬನೂರು ಗ್ರಾಪಂ ಉಪಾಧ್ಯಕ್ಷ ಕಾಡಪ್ಪ, ಸದಸ್ಯ ಅಮರೇಶ ಇಡಪನೂರು, ಹುಸೇನಪ್ಪ, ನಬೀಸಾಬ್, ಮಂಜುನಾಥ, ಶಂಕರ, ಅಮುಲು, ಅಮೃತ್, ಶಾಂತಿ ರಂಜನ್ ಹಾಗೂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement