ಚೌಡಪ್ಪಗೆ ಅಂಬೇಡ್ಕರ್ ಫೆಲೋಶಿಪ್ ಗೌರವ
ಸಿಂಧನೂರು: ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ 2013ನೇ ಸಾಲಿನ ಡಾ. ಅಂಬೇಡ್ಕರ್ ನ್ಯಾಷನಲ್ ಫೆಲೋಶಿಪ್ ಪ್ರಶಸ್ತಿಯನ್ನು ನವದೆಹಲಿಯ ಪಂಚಶಿಲಾ ಆಶ್ರಮದಲ್ಲಿ ಜರುಗಿದ ರಾಷ್ಟ್ರೀಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ನಗರದ ಲೋಕೋಪಯೋಗಿ ಇಲಾಖೆಯ ನೌಕರ ಚೌಡಪ್ಪ ಅವರಿಗೆ ರಾಷ್ಟ್ರಾಧ್ಯಕ್ಷ ಡಾ.ಎಸ್.ಪಿ. ಸುಮನಾಕ್ಷರ ಅವರು ನೀಡಿ ಗೌರವಿಸಿದರು. ಡಾ. ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ಪಡೆದಿರುವ ಚೌಡಪ್ಪ ಅವರಿಗೆ ಜಿಲ್ಲಾ ಚುಸಾಪ ಅಧ್ಯಕ್ಷ ಬೀರಪ್ಪ ಶಂಭೋಜಿ, ರಾಜ್ಯ ಸರ್ಕಾರಿ ನೌಕರ ಒಕ್ಕೂಟದ ತಾಲೂಕಾಧ್ಯಕ್ಷ ದೊಡ್ಡನಗೌಡ, ಶಿಕ್ಷಕರಾದ ಬಸವರಾಜ ಬಿರಾದಾರ, ಸಿಆರ್‌ಪಿ ಅಮರಯ್ಯ ಪತ್ರಿಮಠ, ವೀರಪ್ಪ ಜಕರಡ್ಡಿ, ಸೋಮನಾಥ ಸೂಲಂಗಿ, ತತ್ವಪದ ಗಾಯಕ ನಾರಾಯಣಪ್ಪ ಮಾಡಶಿರವಾರ, ಬಸವರಾಜ ಮೋತಿ, ಬಿ.ಹನುಮೇಶ, ಹನುಮಂತಪ್ಪ ಬೇರ್ಗಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.