ಸೇತುವೆ ನಿರ್ಮಾಣಕ್ಕೆ ಶಾಸಕ ಭೂಮಿ ಪೂಜೆ
ಸಿಂಧನೂರು: ತಾಲೂಕಿನ ವಿರುಪಾಪುರ ಬಳಿ 93.47 ಲಕ್ಷ ಅಂದಾಜು ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಗುರುವಾರ ಶಾಸಕ ಪ್ರತಾಪಗೌಡ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಹೆಚ್ಕೆಡಿಬಿ ಅನುದಾನದ 50 ಲಕ್ಷ ವೆಚ್ಚದಲ್ಲಿ ಅಗಸಿ ನಿರ್ಮಾಣ, ಹಿರೇಬೇರ್ಗಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 10 ಲಕ್ಷದಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣ, ಎಸ್‌ಇಪಿ ಯೋಜನೆಯಡಿ 13 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ರಂಗಾಪುರದಲ್ಲಿ ಎಸ್ಟಿಪಿ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ, 13 ಲಕ್ಷದಲ್ಲಿ ಸಿಸಿ ರಸ್ತೆ, ಗೋನಾಳ ಗ್ರಾಮದಲ್ಲಿ ಜಿಪಂ.ನ ಅನುದಾನದ 5 ಲಕ್ಷ ವೆಚ್ಚದಲ್ಲಿ ಮುದ್ದಾಪುರವರೆಗೆ ಸಿಸಿ ರಸ್ತೆ, ಪಾಂಡುರಂಗ ಕ್ಯಾಂಪಿನಲ್ಲಿ ಎಚ್‌ಕೆಡಿಬಿ ಅನುದಾನದ 5 ಲಕ್ಷ ವೆಚ್ಚದ ರಸ್ತೆ, ಮುದ್ದಾಪುರ ಗ್ರಾಮದಲ್ಲಿ ಗೋನಾಳ ಸಿಸಿ ರಸ್ತೆ, ಶ್ರೀನಿವಾಸ ಕ್ಯಾಂಪಿನಲ್ಲಿ ಹೆಚ್ಕೆಡಿಬಿಯ 5 ಲಕ್ಷ ಖರ್ಚಿನಲ್ಲಿ ರಸ್ತೆ ನಿರ್ಮಾಣ, 5 ಲಕ್ಷದಲ್ಲಿ ನಾಲಾ ಸಿಡಿ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಯಿತು ಎಂದರು. ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಜಿಪಂ ಸದಸ್ಯೆ ಇಂದ್ರಮ್ಮ ಮಲ್ಲನಗೌಡ ಕನ್ನಾರಿ ಇತರರು ಉಪಸ್ಥಿತರಿದ್ದರು.