ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅನಧಿಕೃತ ಔಷಧ ವಿತರಕರ ವಿರುದ್ಧ ಕ್ರಮಕ್ಕೆ ಒತ್ತಾಯ

Lingaraj Badiger
Updated On : 21 Dec 2013, 11:43 am

ಸಿಂಧನೂರು: ಸುಪ್ರೀಂಕೋರ್ಟ್ ತೀರ್ಪಿನಂತೆ ಆಯುಷ್ ವೈದ್ಯಾಧಿಕಾರಿಗಳು ರೋಗಿಗಳಿಗೆ ಅಲೋಪಥಿಕ್ ಔಷಧ ನೀಡುವುದು ಕಾನೂನು ಬಾಹಿರವಾಗಿದ್ದು, ಅಲೋಪಥಿಕ್ ಔಷಧ ನೀಡುವ ಆಯುಷ್ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇನ್ ಒತ್ತಾಯಿಸಿದೆ.
ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದು, ತಾವು ಅಭ್ಯಾಸ ಮಾಡಿರುವ ಆಯುಷ್ ವೈದ್ಯರು ರೋಗಿಗಳಿಗೆ ಆಯುರ್ವೇದಿಕ್ ಔಷಧಿ ನೀಡಬೇಕು. ಅವಸರ ಕಾರಣ ನೀಡಿ ಎಂಬಿಬಿಎಸ್ ವೈದ್ಯರು ಅಲೋಪಥಿಕ್ ಔಷಧ ನೀಡುತ್ತಿದ್ದಾರೆ.
 ಇದರಿಂದ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಹೆಚ್ಚಾಗಿದೆ. ರೋಗಿಯ ದೇಹಸ್ಥಿತಿಯನ್ನು ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದುದು ಅತ್ಯಗತ್ಯ.
ಕಾನೂನು ಬಾಹಿರವಾಗಿ ಔಷಧ ನೀಡುವ ವೈದ್ಯಾಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನ ಸ್ಥಳೀಯ ಘಟಕದ ಅಧ್ಯಕ್ಷ ಡಾ. ಜೆ.ಎನ್. ಇರಕಲ್, ಕಾರ್ಯದರ್ಶಿ ಡಾ.ರವಿಕುಮಾರ ಕೆ., ವೈದ್ಯರಾದ ಡಾ. ಜಗದೀಶ ಮಾದಿನೂರು, ಡಾ. ಚನ್ನನಗೌಡ ಪಾಟೀಲ್, ಡಾ. ಸಿ.ವಿಶ್ವನಾಥ, ಡಾ. ಗೋವಿಂದರಾವ್ ಹಾಗೂ ಇತರರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement