'371 ಕಲಂ ಜಾರಿ ಸದುಪಯೋಗವಾಗಲಿ'
ಸಿಂಧನೂರು: ಹೈದ್ರಾಬಾದ್ ಕರ್ನಾಟಕದ ಭಾಗದ ಶೈಕ್ಷಣಿಕ, ಉದ್ಯೋಗದ ಅಭಿವೃದ್ಧಿ ದೃಷ್ಟಿಯಿಂದ ಜಾರಿಯಾಗಿರುವ 371 ಕಲಂ ಹಿನ್ನೆಲೆಯಲ್ಲಿ ಮಕ್ಕಳು ಕಲಿಕೆಯೆಡೆಗೆ ಹೆಚ್ಚಿನ ಗಮನಹರಿಸಬೇಕು ಎಂದು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ ಹೇಳಿದರು.
ಅವರು ಗ್ರಾಮದ ಗೊರೇಬಾಳ ಶರಣಬಸವೇಶ್ವರ ದೇವಸ್ಥಾನದಲ್ಲಿ ಗೊರೇಬಾಳ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿಆರ್‌ಪಿ ಮಲ್ಲಿಕಾರ್ಜುನಯ್ಯ ಮಾತನಾಡಿ ಕಲಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದರು.
ಎ.ಪಿ.ಎಂ.ಸಿ. ನಿರ್ದೇಶಕಿ ಎನ್.ಶಾಂತಾ ಭೀಮನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ತಾ.ಪಂ.ಸದಸ್ಯೆ ರತ್ನಮ್ಮ ಮಲ್ಲಿಕಾರ್ಜುನ, ಗ್ರಾ.ಪಂ.ಸದಸ್ಯರಾದ ನಿವೇದಿತಾ ಸೋಮನಗೌಡ, ದೇವೇಂದ್ರಪ್ಪ ದಾಸರ, ಮುಖಂಡರಾದ ಎಂ.ರಂಗನಗೌಡ, ಮಲ್ಲಿಕಾರ್ಜುನಯ್ಯ, ಸೋಮನಗೌಡ, ರಂಗನಾಥ ಗೌಡನಬಾವಿ, ಶೇಖರಯ್ಯಸ್ವಾಮಿ, ಸಣ್ಣ ಶರಣೇಗೌಡ, ಬಸವರಾಜಪ್ಪ, ಮುಖ್ಯಗುರು ಕುಪ್ಪಮ್ಮ ಮತ್ತಿತರರು ಇದ್ದರು.