ಅಂಗನವಾಡಿ ಕಳಪೆ ಕಾಮಗಾರಿ; ಪರಿಶೀಲಿಸಲು ಆಗ್ರಹ
ಶಹಾಪುರ: ಪಟ್ಟಣದ ವಾರ್ಡ್ 7ರಲ್ಲಿ ಅಂಗನವಾಡಿ ಕೇಂದ್ರದ ಕಾಮಗಾರಿ ನಡೆದಿದ್ದು, ಪ್ರಸ್ತುತವಾಗಿ ತಳಮಟ್ಟದಲ್ಲಿ ಸರಿಯಾದ ರೀತಿಯ ನಿರ್ವಹಣೆ ಮಾಡದೆ ಕಳಪೆಯಿಂದ ಕಾಮಗಾರಿ ನಡೆದಿದೆ. ಮೇಲಾಧಿಕಾರಿಗಳು ಈ ಕುರಿತು ಪರಿಶೀಲಿಸಬೇಕೆಂದು ಸಣ್ಣ ಅಯ್ಯಪ್ಪ ನಾಸಿ ಮತ್ತು ದಸ್ತಗೀರ ಬೆಂಡೆಬೆಂಬಳಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರ ಬರೆದಿರುವ ಅವರು ಚಾಮುಂಡೇಶ್ವರಿ ನಗರದ ಸಮೀಪವಿರುವ ಪ್ರಸ್ತುತ ಅಂಗನವಾಡಿ ಕೆಂದ್ರದ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಮೇಲಾಧಿಕಾರಿಗಳು ಇದನ್ನು ಪರಿಶೀಲಿಸಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಸಂಬಂಧಿವಿಲ್ಲದಂತೆ ಇದ್ದು ಇಂತಹ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.