ಆಸ್ಪತ್ರೆಯಲ್ಲಿ ಮುಂದುವರೆದ ಅವ್ಯವಸ್ಥೆ
ಶಹಾಪುರ: ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಈ ಹಿಂದೆ ಭೇಟಿ ನೀಡಿದ ಸ್ಥಳೀಯ ಶಾಸಕ ಗುರುಪಾಟೀಲ ಶಿರವಾಳ ಅಲ್ಲಿನ ಅವ್ಯವಸ್ಥೆ ಕಂಡು, ಮುಂದಿನ ದಿನಗಳಲ್ಲಿ ಸುಧಾರಿಸಿಕೊಳ್ಳಲು ಸೂಚನೆ ನೀಡಿದ್ದರು. ಆದರೆ ಅಲ್ಲಿನ ಅವ್ಯವಸ್ಥೆ ಹಾಗೇ ಮುಂದುವರೆದಿದ್ದನ್ನು ಕಂಡು ಡಿ. 21ರಂದು ಭೇಟಿ ನೀಡಿದ ಸಂದರ್ಭದಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಆಸ್ಪತ್ರೆಯಲ್ಲಿ ಎಸ.ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದತ್ತಾತ್ರೇಯ ಅವರ ಮೇಲೆ ತಕ್ಷಣವೇ ಕ್ರಮ ಜರುಗಿಸುವಂತೆ ಸಂಬಂಧಿಸಿದ ಡಿಎಚ್ಓ ಮತ್ತು ಸಿಇಓಗೆ ಪತ್ರ ಬರೆದಿದ್ದಾರೆ. ದತ್ತಾತ್ರೇಯ ಸುಮಾರು ವರ್ಷಗಳಿಂದ ಬಡ್ತಿ ಪಡೆದು ಎಸ್ಡಿಸಿಯಾಗಿ ಸ್ಥಳೀಯ ಆಸ್ಪತ್ರೆಯಲ್ಲಿಯೇ ಬೇರೂರಿದ್ದಾರೆ. ಹಲವಾರು ಯೋಜನೆಗಳ ಕಡತಗಳನ್ನು ನೆನೆಗುದಿಗೆ ಹಾಕಿದ್ದಲ್ಲದೆ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜೊತೆ ದಾದಿಯರ ಜೊತೆ ಮತ್ತು ಆಸ್ಪತ್ರೆಗೆ ಬಂದ ರೋಗಿಗಳ ಜೊತೆಗೂ ಸಹಕಾರ ನೀಡದೆ ಮನಬಂದಂತೆ ಉದ್ಧಟತನ ಪ್ರದರ್ಶಿಸಿದ್ದಾರೆ ಎಂದಿದ್ದಾರೆ.