ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಯಶಸ್ಸು

Mainashree
Updated On : 23 Dec 2013, 11:16 am

ಗುರುಮಠಕಲ್: ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡಿದಾಗ ಮಾತ್ರ ಜೀವನದಲ್ಲಿ ಯಶ್ವಸಿ ಗಳಿಸಲು ಸಾಧ್ಯ.  ಪ್ರತಿಯೊಬ್ಬರೂ ದೇಶದ ಹಿತಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಗ್ರಾಮದ ಮುಖಂಡ ಮಲ್ಲಿಕಾರ್ಜುನಯ್ಯ ಹೊಸಮಠ ಹೇಳಿದರು.
ದಾರಿ ದೀಪವಾಗಿ: ಗುರುಸಣಗಿ ಗ್ರಾಮದಲ್ಲಿ ಭಗತ್‌ಸಿಂಗ್ ಯುವಕ ಸಂಘದ ಕಾರ್ಯಾಲಯ ಉದ್ಘಾಟಿಸಿ, ಗ್ರಾಮೀಣ ಭಾಗದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತಿವೆ. ಅದರ ಬಗ್ಗೆ ಹಂತಹಂತವಾಗಿ ಹೋರಾಟ ಮಾಡಿ ನಾವು ನಿಮ್ಮ ಜೊತೆ ಕೈ ಜೋಡಿಸುತ್ತೇವೆ. ದೀಪ ಬೆಳಗಲು ಎಣ್ಣೆ ಬೇಕು. ದೀಪ ನೀವಾಗಿ, ಎಣ್ಣೆ ನಾವಾಗುತ್ತೇವೆ. ಸದಾ ನಿಮ್ಮ ಸಂಘ ದೀಪದಂತೆ ಸಾಮಾನ್ಯ ಜನರಿಗೆ ದಾರಿ ದೀಪವಾಗಲಿ ಎಂದು ಮಾರ್ಮಿಕವಾಗಿ ನುಡಿದರು.
ಸರ್ಕಾರಿ ಯೋಜನೆ: ನಂತರ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾದ್ಯಕ್ಷ ಸೈದಪ್ಪ ಗುತ್ತೆದಾರ ಗ್ರಾಮೀಣ ಭಾಗದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯುವಕ ಸಂಘಗಳ ಪಾತ್ರ ಮುಖ್ಯವಾಗಿದೆ. ಸಂಘಟನೆ ಕಟ್ಟವುದು ಬಹಳ ಸುಲಭ. ಅದನ್ನು ಉಳಿಸಿಕೊಂಡು ಹೋಗುವದು ತುಂಬಾ ಕಷ್ಟ. ಹೀಗಾಗಿ ಸಂಘದಲ್ಲಿ ಇರುವ ಪದಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಅದಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶ್ರೀ ಸಿದ್ದಣ್ಣಗೌಡ ಶಾಂತವೀರ, ರಾಮರಡ್ಡಿ ಗೌಡ, ಸಿದ್ದಪ್ಪ ಲಿಂಗೇರಿ, ಡಾ. ದೇವಿಂದ್ರಪ್ಪ ಸಾಹುಕಾರ, ಗಂಗಣ್ಣ ಪಾಂಚಳ, ಹುಲೆಪ್ಪ, ಶರಣಗೌಡ ಹಿರೇಗೌಡರ, ಭೀಮಣ್ಣಗೌಡ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement