ವಿಕಲಚೇತನರ ಬಗ್ಗೆ ಅನುಕಂಪವಿರಲಿ: ನ್ಯಾ. ಶಶಿಧರ
ಸಿಂಧನೂರು: ಸ್ಥಳೀಯ ನ್ಯಾಯಾಲಯದಲ್ಲಿ ವಿಕಲಚೇತನರ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಸಪ್ತಾಹ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ ಉದ್ಘಾಟಿಸಿದರು.
ನಂತರ ಮಾತನಾಡಿ, ವಿಕಲಚೇತನರ ಬಗ್ಗೆ ಪ್ರತಿಯೊಬ್ಬರಿಗೂ ಅನುಕಂಪ ಇರಬೇಕು. ಅವರ ಬಗ್ಗೆ ತಾತ್ಸಾರ ಭಾವ ತೋರಬಾರದು. ಇತ್ತೀಚನ ದಿನದಲ್ಲಿ ಕ್ರೀಡೆಯಲ್ಲೂ ವಿಕಲಚೇತನರ ಸಾಧನೆ ಕಂಡು ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಎಸ್. ರಾಯಣ್ಣವರ್, ವಕೀಲರ ಸಂಘದ ಅಧ್ಯಕ್ಷ ಕೆ. ಭೀಮನಗೌಡ, ಎಪಿಪಿ ಶೇಖರಪ್ಪ ಶಾಲಿಗನೂರು, ಖಾಜಿ ಮಲಿಕ್, ಡಾ. ಈಶ್ವರ ದಾಸಪ್ಪನವರ,ವಿಕಲಚೇತನರ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ದೇವೆಂದ್ರಗೌಡ, ಜಿಲ್ಲಾಧ್ಯಕ್ಷ ಮಹ್ಮದ್ ಹುಸೇನ್, ತಾಲೂಕಾಧ್ಯಕ್ಷ ಹನುಮಂತಪ್ಪ ಗಿಣಿವಾರ ಮುಖಂಡ ಶಂಕರ ಮತ್ತಿತರರು ಇದ್ದರು.