ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Mainashree
Updated On : 23 Dec 2013, 11:12 am

ಸಿಂಧನೂರು: ತಾಲೂಕಿನ ಗುಡದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿ.ಪಂ. ಸದಸ್ಯ ಶಿವನಗೌಡ ಎಲೆಕೂಡ್ಲಿಗಿ ಭೂಮಿ ಪೂಜೆ ನೆರವೇರಿಸಿದರು.
ಜಿ.ಪಂ.ನ 2013-14ನೇ ಸಾಲಿನಲ್ಲಿ ರು. 3 ಲಕ್ಷ ವೆಚ್ಚದಲ್ಲಿ ರಾಮರೆಡ್ಡಿಕ್ಯಾಂಪಿನಿಂದ ತೆಗ್ಗಿನಗಿಡ ಕ್ಯಾಂಪ್‌ಗೆ ಹೋಗುವ ರಸ್ತೆ ಅಭಿವೃದ್ಧಿ, ತೆಗ್ಗಿನಗಿಡಕ್ಯಾಂಪ್‌ನಲ್ಲಿ ಎನ್‌ಡಿಡಬ್ಲ್ಯೂಪಿ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ ರು. 2.50 ಲಕ್ಷ ಹಾಗೂ ಕಲ್ಲೂರು ಗ್ರಾಮದಲ್ಲಿ ಬಿಆರ್‌ಜಿಎಫ್ ಯೋಜನೆಯಡಿ ರು. 2.64 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜಿ.ಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕಾಂಗ್ರೆಸ್ ಮುಖಂಡರಾದ ಮಲ್ಲನಗೌಡ ಕನ್ನಾರಿ, ವೆಂಕೋಬಣ್ಣ ಕಲ್ಲೂರು, ದೇವೇಂದ್ರಪ್ಪ, ಮುದುಕಪ್ಪ ಸಾಹುಕಾರ, ವೀರಭದ್ರಯ್ಯ ಸ್ವಾಮಿ, ಗ್ರಾ.ಪಂ. ಸದಸ್ಯ ಬಸವರಾಜ, ಯಮನಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement