ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಹಿತ್ಯ ಓದಿ: ಗುರು ಪಾಟೀಲ

Mainashree
Updated On : 23 Dec 2013, 11:15 am

ಶಹಾಪುರ: ಬದುಕು ವಿಶಿಷ್ಟತೆಯನ್ನು ಪಡೆಯಲು ಪಠ್ಯದ ಜತೆ ಜತೆಗೆ ಸಾಹಿತ್ಯ ಅಧ್ಯಯನ ಮಾಡಿದರೆ ಪ್ರತಿಯೊಬ್ಬರೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು.
ಅವರು ಭೀಮರಾಯನಗುಡಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಲಾ ರಂಗ ಮತ್ತು ಕನ್ನಡ ನಿತ್ಯೋತ್ಸವ ಬಳಗದ ಆಶ್ರಯದಲ್ಲಿ ಲೇಖಕ, ಸಾಹಿತಿ ಡಾ. ಅಬ್ದುಲ್ ಕರಿಂ ಕನ್ಯಕೋಳೂರ ಅವರು ಬರೆದ 'ಸಗರನಾಡ ಸಂಸ್ಕೃತಿ ಸಮೀಕ್ಷೆ' ಸಂಶೋಧನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ಆಸಕ್ತಿ ಹೊಂದಿ: ಅಬ್ದುಲ್ ಕರೀಂ ಬಡತನದಿಂದ ಬಂದವರು, ಶ್ರಮದಿಂದ ಓದಿ ಈ ಹಂತಕ್ಕೆ ಮುಟ್ಟಿರುವುದು ಸಮಾಜಕ್ಕೆ ಹೆಮ್ಮೆ ಅನಿಸುತ್ತದೆ. ವಿದ್ಯಾರ್ಥಿಗಳು ಓದಿನೊಂದಿಗೆ ಸಾಹಿತ್ಯ ಅಧ್ಯಯನ, ಸಂಶೋಧನೆ, ಕಲೆ ಹೀಗೆ ಆಸಕ್ತಿಹೊಂದಿ ಮೇಲೆ ಬರಬೇಕು. ಸಮಾಜದ ಆಸ್ತಿ ನೀವಾಗಬೇಕು ಎಂದರು.
ಕಿಂದರ ಜೋಗಿ: ಕಾರ್ಯಕ್ರಮದಲ್ಲಿ ಗ್ರಂಥ ವಿಮರ್ಶಕರಾಗಿ ಆಗಮಿಸಿದ ಗುಲ್ಬರ್ಗ ವಿವಿ  ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಚನ್ನಣ್ಣ ವಾಲೀಕಾರ ಮಾತನಾಡಿ, ನಾನು ನಿಮ್ಮಹಾಗೆ ಸಾಮಾನ್ಯ ಮನುಷ್ಯ. ಕಷ್ಟದ ಬದುಕಿನಲ್ಲಿ ಶಿಕ್ಷಣ ಪಡೆದು ಶ್ರಮ ವಹಿಸಿ, ಕಿಂದರ ಜೋಗಿಯ ಹಾಗೆ ತಿರುಗಾಡಿ ಊರೂರು ಅಲೆದು ನಂತರ ವಿಶ್ವ ವಿದ್ಯಾಲಯದಲ್ಲಿ ಉನ್ನತ ಸ್ಥಾನಕ್ಕೆ ತಲುಪಿ, ಸಾಹಿತ್ಯ ಗೀಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿತು. ನನ್ನ ಶಿಷ್ಯ ಅಬ್ದುಲ್ ಕರೀಂ ನನ್ನ ಸಮನಾಗಿ ಬೆಳೆದಿದ್ದಾನೆ. ಅದಕ್ಕೆ ಅವನ ಪರಿಶ್ರಮವಿದೆ. ನೀವು ಕೂಡಾ ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂದು, ಸಾಹಿತ್ಯ ಓದಿ ಅದನ್ನು ಬದುಕಿನೊಂದಿಗೆ ಅಳವಡಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ, ಲೇಖಕ ಡಾ. ಅಬ್ದು ಲ್ ಕರೀಂ ಮಾತನಾಡಿದರು. ಕಾಲೇಜಿನ ಉಪ ಪ್ರಾಚಾರ್ಯ ನಾಗಣ್ಣಗೌಡ ಹಿರೇಗೌಡ, ಮಲ್ಲರಡೆಪ್ಪ ಹೋತಪೇಟ, ಗ್ರಂಥ ದಾನಿಗಳಾದ ಶಾಂತಾಬಾಯಿ ಘವಳ್ಕರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement