ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸುದ್ದಿ ಸಂಕ್ಷೇಪ

Mainashree
Updated On : 23 Dec 2013, 11:15 am

'ವರ್ತಕರ ವಿರುದ್ಧ ಆರೋಪ ಸರಿಯಲ್ಲ'
ರಾಯಚೂರು: ಕೃಷಿ ಉತ್ಪನ್ನಗಳ ಖರೀದಿದಾರರ ಬಗ್ಗೆ ರೈತ ಸಮುದಾಯವು ಅನಗತ್ಯವಾಗಿ ಆರೋಪ ಹೊರಿಸುವ ಕಾರ್ಯ ಮಾಡುತ್ತಿದೆ ಎಂದು ಗಂಜ್ ವರ್ತಕರ ಅಸೋಸಿಯೇಷನ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ ಅವರು, ಈಚೆಗೆ ನಗರದ ಗಂಜ್ ಪ್ರದೇಶದಲ್ಲಿ ಈರುಳ್ಳಿ ಖರೀದಿಗೆ ಸಂಬಂಧಿಸಿ ಬೆಳೆಗಾರರು ವರ್ತಕರ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ವರ್ತಕರು ಹೆಚ್ಚಿನ ಪ್ರಮಾಣದಲ್ಲಿ ಸ್ಯಾಂಪಲ್ ಪಡೆಯುತ್ತಿದ್ದಾರೆಂದು ಹೇಳುತ್ತಿರುವುದು ಸಮಂಜಸವಲ್ಲ ಎಂದಿದ್ದಾರೆ. ಈಚೆಗೆ ನಡೆದ ರೈತರೊಂದಿಗಿನ ಸಭೆಯಲ್ಲಿ ರೈತರು ಸ್ವಚ್ಛಗೊಳಿಸದೇ ಈರುಳ್ಳಿಯನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಗುಣಮಟ್ಟದ ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದಲ್ಲಿ ಸ್ಯಾಂಪಲ್ ಪಡೆಯುವ ಅವಶ್ಯಕತೆಯಿರುವುದಿಲ್ಲ. ಆದರೆ ಸದ್ಯ ರೈತರು ಕೊಳೆತ, ಕಸಕಡ್ಡಿಗಳಿರುವ ಈರುಳ್ಳಿಯನ್ನು ಮಾರಾಟಕ್ಕೆ ತರುತ್ತಿರುವುದು ಸ್ಯಾಂಪಲ್ ಪಡೆಯಲು ದಾರಿ ಮಾಡಿದೆ ಎಂದು ತಿಳಿಸಿದ್ದು, ಸಭೆಯಲ್ಲಿ ಯಾವುದೇ ರೀತಿಯ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಆದರೂ ಮಾರುಕಟ್ಟೆಯಲ್ಲಿನ ವರ್ತಕರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವರು ರೈತರ ಹೆಸರಿನಲ್ಲಿ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಆಡಳಿತವನ್ನು ಒತ್ತಾಯಿಸಿದ್ದು, ರೈತರು ಸ್ವಚ್ಛಗೊಳಿಸಿದ ಹಾಗೂ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಲ್ಲಿ ಸ್ಪರ್ಧಾತ್ಮಕ ಬೆಲೆ ಸಿಗುವುದರಲ್ಲಿ ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.
ಜೂಜು ತಡೆಗೆ ತಂಡ ರಚನೆ: ಮನವಿ
ರಾಯಚೂರು: ಜಿಲ್ಲೆಯಲ್ಲಿ ಮಟಕಾ ಮತ್ತಿತರೆ ಜೂಜು ತಡೆಗೆ ಜಿಲ್ಲಾ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು ಸಾರ್ವಜನಿಕರು ಅಗತ್ಯ ಮಾಹಿತಿ ಒದಗಿಸುವಂತೆ ಮನವಿ ಮಾಡಿದೆ. ಈ ಕುರಿತು ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ಪ್ರಕಟಣೆ ನೀಡಿ, ಜೂಜು ನಿವಾರಣೆ ನಿಟ್ಟಿನಲ್ಲಿ ಡಿಸಿಐಬಿ ಯ ಪಿಎಸ್ಸೈಗಳಾದ ಎ.ಟಿ.ಪಾಟೀಲ್-0480803808, ಜೆ.ಕರುಣೇಶಗೌಡ-9480803809 ಮತ್ತು ಅಲೀಸಾಬ್-9480803807 ಅವರಿರುವ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ತಂಡದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವ ಮೂಲಕ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement