ಹೊಸ ಸಮಿತಿ ರಚನೆಗೆ ಆಗ್ರಹ
ಕೆಂಭಾವಿ: ಪಟ್ಟಣದ ಉರ್ದು ಪ್ರಾಥಮಿಕ ಶಾಲೆಯಲ್ಲಿ ರಚನೆಯಾದ ಎಸ್‌ಡಿಎಂಸಿ ಸಮಿತಿಯು ರಾಜಕೀಯ ಪ್ರೇರಿತವಾಗಿದ್ದು, ಇದನ್ನು ರದ್ದುಪಡಿಸಿ ಹೊಸ ಸಮಿತಿಯನ್ನು ರಚನೆ ಮಾಡಬೇಕೆಂದು ಪಾಲಕರಾದ ಮಹ್ಮದಸಾಬ ಸಾಸನೂರ, ತಾಹೆರಪಾಶಾ ಖಾಜಿ, ಮಷಾಕ ಸಾಸನೂರ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿ, ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪಾಲಕರ ಗಮನಕ್ಕೆ ತರದೆ ಬೇರೆ ವ್ಯಕ್ತಿಗಳನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿದ್ದು, ಇದು ದೋಷಪೂರಿತವಾಗಿದೆ. ಮೊದಲು ಇದ್ದ ಅಧ್ಯಕ್ಷರ ಗಮನಕ್ಕೆ ತರದೇ ಈ ಸಮಿತಿ ರಚನೆಯಾಗಿದ್ದು, ಇಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ಆದ್ದರಿಂದ ಈ ಶಾಲಾಭಿವೃದ್ಧಿ ಸಮಿತಿಯನ್ನು ರದ್ದು ಮಾಡಲು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿದ್ದಾರೆ.