ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

30ರಂದು ಹಾರುಬೂದಿ ಬಳಕೆ ಕಾರ್ಯಾಗಾರ

Vishwanath S
Updated On : 26 Dec 2013, 11:28 am

ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ಡಿ.30ರಂದು ಕೃಷಿಯಲ್ಲಿ ಹಾರುಬೂದಿ ಬಳಕೆ ಕುರಿತ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಕಾರ್ಯಾಗಾರ ಆಯೋಜಿಸಿದ್ದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೃಷಿ ವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ವಹಿಸುವರು. ಅತಿಥಿಗಳಾಗಿ ಜಿಪಂ ಸಿಇಒ ಡಾ. ಮುದ್ದುಮೋಹನ್, ವಿವಿ ಕೃಷಿ ವಿಸ್ತರಣಾ ನಿರ್ದೇಶಕ ಡಾ. ವಿಶ್ವನಾಥ್, ನಿವೃತ್ತ ನಿರ್ದೇಶಕ ಡಾ. ಸಿ.ವಿ. ಪಾಟೀಲ್, ಕಾರ್ನಿಕ್ ಸಂಸ್ಥೆಯ ನಿವೃತ್ತ ನಿರ್ದೇಶಕ ಕಾಂತರಾಜು, ಆರ್ಟಿಪಿಎಸ್ ಇಡಿ ವೇಣುಗೋಪಾಲ್, ಡಾ. ಸೋಮಶೇಖರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.ಕೃಷಿ ವಿವಿ ಮತ್ತು ಕ್ಯಾಷುಟೆಕ್ ಶಕ್ತಿನಗರ ಇವರ ಸಂಯುಕ್ತಾಶ್ರಯದಲ್ಲಿ ರೈತರಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಇದರ ಪ್ರಯೋಜನ ಪಡೆಯುವಂತೆ ಪ್ರಕಟಣೆ ತಿಳಿಸಿದೆ.
ಫಿಜಿಶಿಯನ್
ದಿನಾಚರಣೆ ಯಶಸ್ವಿ
ರಾಯಚೂರು: ನಗರದ ನವೋದಯ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಫಿಜಿಶಿಯನ್ ವೈದ್ಯರ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.ನವೋದಯ ಶಿಕ್ಷಣ ಸಂಸ್ಥೆಯ ಕುಲಸಚಿವ ಡಾ.ಟಿ. ಶ್ರೀನಿವಾಸ ಕಾರ್ಯಕ್ರಮ ಉದ್ಘಾಟಿಸಿ, ವೈದ್ಯಕೀಯ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಸದುಪಯೋಗ ಪಡೆಯಲು ಎಲ್ಲರೂ ಮುಂದಾಗಬೇಕು. ಹಿಂದುಳಿದ ಪ್ರದೇಶಗಳಲ್ಲಿ ವ್ಯೆದ್ಯಕೀಯ ಸೌಲಭ್ಯ ಕಲ್ಪಿಸಲು ಮತ್ತು ಅದರ ಬಗ್ಗೆ ಆರೋಗ್ಯ ಜಾಗೃತಿ ಮಾಹಿತಿ ನೀಡುವಂತ ಕಾರ್ಯಕ್ರಮ ಹೆಚ್ಚು ಪ್ರಮಾಣದಲ್ಲಿ ಆಯೋಜಿಸಬೇಕಿದೆ ಎಂದರು.ಮುಖ್ಯ ಅತಿಥಿ ನವೋದಯ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಎಸ್.ಆರ್. ಹೆಗಡೆ ಮಾತನಾಡಿ, ವೈದ್ಯರು ನಗರ ಪ್ರದೇಶದ ಜತೆಗೆ ಗ್ರಾಮೀಣ ಪ್ರದೇಶದಲ್ಲಿನ ಜನತೆಗೆ ವೈದ್ಯಕೀಯ ಸೇವೆಗಳು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.ಪ್ರಾಚಾರ್ಯ ಡಾ. ವಿಜಯಚಂದ್ರ ಮಾತನಾಡಿ, ದೇಶದಲ್ಲಿ ವೈದ್ಯರ ಚೀಟಿ ಇಲ್ಲದೇ ಔಷಧ ಮಳಿಗೆಗಳಲ್ಲಿ ಔಷಧ ನೀಡಲಾಗುತ್ತದೆ. ಅದರಿಂದಾಗಿ ಜನ ಸಾಮಾನ್ಯರು ಔಷಧವನ್ನು ತಪಾಸಣೆಗೆ ಒಳಪಡದೇ ಸೇವಿಸುತ್ತಿರುವುದು ಅಡ್ಡಪರಿಣಾಮಗಳಿಗೆ ದಾರಿ ಎಂದು ಕಳವಳ ವ್ಯಕ್ತಪಡಿಸಿದರು.ಪ್ರೊ. ಡಾ. ಚೈತನ್ಯ ಕುಮಾರ ಎಸ್, ಪ್ರೊ. ಡಾ. ರಾಮಕೃಷ್ಣ, ಡಾ. ವಿವೇಕ ಪಾಟೀಲ್, ಡಾ. ಆನಂದ ಶಂಕರ, ಡಾ.ಬಿ. ಮಹಾಲಿಂಗಪ್ಪ, ಡಾ. ಎನ್.ಎಸ್. ಜವಳಿ, ಡಾ. ಸುರೇಶ ಸಗರದ, ಡಾ. ಪಾಟೀಲ್, ಸೋಮನಾಥ ರೆಡ್ಡಿ ಗಣದಿನ್ನಿ ಸೇರಿ ಅನೇಕರಿದ್ದರು.
ಜಿಪಂ ಉಪ ಕಾರ್ಯದರ್ಶಿಗಳ ವರ್ಗಾವಣೆ ಬೇಡ
ಲಿಂಗಸ್ಗೂರು: ರಾಯಚೂರು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಅವರ ವರ್ಗಾವಣೆ ಮಾಡದೆ ಇಲ್ಲಿಯೇ ಮುಂದುವರಿಸಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಯಚೂರು ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ದಕ್ಷ ಅಧಿಕಾರಿಯಾಗಿದ್ದು, ಕಳೆದ 2013ರ ಸೆಪ್ಟೆಂಬರ್‌ನಲ್ಲಿ ಬೇರೆ ಕಡೆಯಿಂದ ವರ್ಗವಾಗಿ ಬಂದು ಹಾಜರಾಗಿ ಇಂದಿಗೆ 4 ತಿಂಗಳಾಗಿವೆ. ಅವರ ಸ್ಥಳದಲ್ಲಿ ವಿಜಯ ಜೋತ್ಸಾ ಅವರನ್ನು ನೇಮಿಸಿ ಖಾಲಿ ಇರುವ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯ ಪ್ರಭಾರ ನಿರ್ವಹಿಸಲು ಆದೇಶಿಸಲಾಗಿದೆ. ಈಗ ಮುಕ್ಕಣ್ಣ ಕರಿಗಾರಗೆ ಸ್ಥಳ ನಿಯುಕ್ತಿಗೊಳಿಸದೆ ಅತಂತ್ರ ಸ್ಥಿತಿ ಉಂಟು ಮಾಡಿದ್ದಾರೆ.  ಕೂಡಲೇ ವರ್ಗಾವಣೆ ತಡೆ ಹಿಡಿದು ಜಿಪಂ ಉಪ ಕಾರ್ಯದರ್ಶಿ-1 ಸ್ಥಾನದಲ್ಲೇ ಮುಂದುವರಿಸಬೇಕೆಂದು ಸಂಘದ ಅಧ್ಯಕ್ಷ ಕುಪ್ಪಣ್ಣ ಕೊಡ್ಲಿ, ಗುಂಡಪ್ಪ ಕಾಚಾಪುರ, ಶಾಂತಪ್ಪ ಆನ್ವರಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement