ನಾಳೆ ಶಿವಲಿಂಗ ಪ್ರತಿಷ್ಠಾಪನೆ
ಸಿಂಧನೂರು: ತಾಲೂಕಿನ ಗೋನವಾರ ಮಲ್ಲಯ್ಯ ಮ್ಯಾಕಲ್ ಅವರು ಧರ್ಮದ ಏಳಿಗೆ, ಮನುಕುಲದ ಉದ್ಧಾರ ಮತ್ತು ವಿಶ್ವಶಾಂತಿಗಾಗಿ 12 ಜ್ಯೋತಿರ್ಲಿಂಗಗಳ ದರ್ಶನ ಪಡೆದು ಮರಳಿ ಗ್ರಾಮಕ್ಕೆ ಆಗಮಿಸುವ ಸವಿನೆನಪಿಗೆ ಗ್ರಾಮಸ್ಥರು ಡಿ.27ರಂದು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಮತ್ತು ಮಹಾಶಿವಲಿಂಗ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಳಬಳ್ಳಾರಿ ಸಿದ್ದಲಿಂಗ ಸ್ವಾಮೀಜಿ, ಅಡವಿ ಅಮರೇಶ್ವರ, ಚಿಕಲಪರ್ವಿ, ಯದ್ದಲದೊಡ್ಡಿ, ಮಾನವಿ, ಉಟಕನೂರ, ಗೌಡನಬಾವಿ, ರಾಜನಹಳ್ಳಿ, ಅಂಕಲಿಮಠ, ತಿಂಥಣಿಬ್ರಿಜ್, ಹಂಸನೂರ, ಗೋನವಾರ, ಗೊಲ್ಲಪಲ್ಲಿ, ಹಂಸನೂರ ಮಠ ಮತ್ತಿತರ ಮಠಾಧೀಶರು ವಹಿಸಲಿದ್ದಾರೆ. ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸುವರು. ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ.ಶ್ರೀರಾಮುಲು ಅಧ್ಯಕ್ಷತೆ ವಹಿಸುವರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಹಂಪನಗೌಡ ಬಾದರ್ಲಿ, ವೆಂಕಟೇಶ ನಾಯಕ, ಪ್ರತಾಪಗೌಡ ಪಾಟೀಲ್, ಹಂಪಯ್ಯ ನಾಯಕ, ತಿಪ್ಪರಾಜ ಹವಾಲ್ದಾರ, ಮಾಜಿ ಶಾಸಕರಾದ ವೆಂಕಟರಾವ್ ನಾಡಗೌಡ, ಆರ್.ನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ತಾಲೂಕಿನ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.