ಏಸುಕ್ರಿಸ್ತನ ಆದರ್ಶ ಪಾಲಿಸಿ: ವಜ್ಜಲ್
ಮುದಗಲ್: ಏಸುಕ್ರಿಸ್ತ ಮನುಷ್ಯ ಕುಲಕ್ಕೆ ಶಾಂತಿ, ಸೌಹಾರ್ದತೆಯಿಂದ ಬಾಳುವಂತೆ ಸಂದೇಶ ನೀಡಿದ್ದಾರೆ. ಅವರ ತತ್ವ ಆದರ್ಶಗಳನ್ನು ಮನುಷ್ಯರಾದ ನಾವುಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಚರ್ಚ್ನಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ರಿಸ್ತನು ಶಾಂತಿ ಸಂದೇಶವನ್ನು ನೀಡಿದ್ದಾನೆ. ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದು,
ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಗುಣಮಟ್ಟದ ಶಿಕ್ಷಣ ಅವಶ್ಯ: ಶಿಕ್ಷಣದಿಂದ ಮಾತ್ರ ಪ್ರಗತಿ ಎನ್ನುವುದನ್ನು ಪ್ರತಿಯೊಬ್ಬರು ತಿಳಿಯಬೇಕು, ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಇಲ್ಲದಿದ್ದರೆ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದೆ ಎಂದರು.
ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಠ, ಮಂದಿರ, ಕ್ರಿಶ್ಚಿಯನ್ ಸಂಸ್ಥೆಗಳು ಶಿಕ್ಷಣಕ್ಕೆ ಮಹತ್ವ ನೀಡಿದ್ದರಿಂದಾಗಿ ಶೈಕ್ಷಣಿಕ ಪ್ರಗತಿಯಾಗಿದೆ. ಇನ್ನೂ ಅಭಿವೃದ್ಧಿ ಕಾಣಲು ಗುಣಮಟ್ಟದ ಶಿಕ್ಷಣ ಅತ್ಯವಶ್ಯ ಎಂದರು.
ಮುದಗಲ್ ಚರ್ಚ್ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇಲ್ಲಿ ಕುಡಿಯುವ ನೀರು, ಸ್ವಾಗತ ಕಮಾನು ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಪ್ರೀತಿಯಿಂದ ಏನನ್ನಾದರೂ ಗೆಲ್ಲಬಹುದು: ಇನ್ನೊಬ್ಬ ಅತಿಥಿ ಡಾ. ಈಶ್ವರ ಸವಡಿ ಮಾತನಾಡಿ, ಏಸು ಮನುಷ್ಯರಿಗೆ ಶಾಂತಿ, ಪ್ರೀತಿಯಿಂದ ಜೀವನ ಸಾಗಿಸುವುದನ್ನು ಕಲಿಸಿದವರು. ಪ್ರೀತಿಯಿಂದ ಏನನ್ನಾದರೂ ಗೆಲ್ಲಬಹುದು ಎನ್ನುವುದಕ್ಕೆ ಏಸು ಕ್ರಿಸ್ತರೇ ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ರಜ್ಜಬಲಿ ಟಿಂಗ್ರಿ, ಉಪಾಧ್ಯಕ್ಷೆ ಹಂಪಮ್ಮ ನಾಗನಗೌಡ, ಜೆಡಿಎಸ್ ಅಧ್ಯಕ್ಷ ಅಮೀರಬೇಗ ಉಸ್ತಾದ, ಕರವೇ ಅಧ್ಯಕ್ಷ ಎಸ್.ಎ. ನಹೀಂ ಪಪಂ ಸದಸ್ಯರು ಉಪಸ್ಥಿತರಿದ್ದರು.
ಸನ್ಮಾನ: ಕ್ರಿಸ್ಮಸ್ ಅಂಗವಾಗಿ ಚರ್ಚ್ನಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಫಾದರ್
ಆಲ್ಫನ್ ಎಂ.ಎ. ಅವರು ಶಾಸಕ ಮಾನಪ್ಪ ವಜ್ಜಲ್ರಿಗೆ, ಪಪಂ ಅಧ್ಯಕ್ಷ ರಜ್ಜಬಲಿ, ಉಪಾಧ್ಯಕ್ಷೆ ಹಂಪಮ್ಮ ನಾಗನಗೌಡ, ಸದಸ್ಯರಿಗೆ ಸನ್ಮಾನಿಸಿದರು.