ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಾಧನೆಯಿಂದ ಕೀರ್ತಿ ತನ್ನಿ: ಇಂದಿರಮ್ಮ

Vishwanath S
Updated On : 27 Dec 2013, 12:41 pm

ಸಿಂಧನೂರು: ತಾಲೂಕಿನ ವಿರುಪಾಪುರ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ಮೈಲಕ್ಯಾಂಪ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸದಸ್ಯೆ ಇಂದಿರಮ್ಮ ಮಲ್ಲನಗೌಡ ಕನ್ನಾರಿ, ಮಕ್ಕಳು ಕಲಿಕೆಯಲ್ಲಿ ಆಸಕ್ತಿವಹಿಸಿ ಸಾಧನೆ ಮಾಡುವ ಮೂಲಕ ತಂದೆ- ತಾಯಿಗಳಿಗೆ, ಶಾಲೆಗೆ, ಗ್ರಾಮಕ್ಕೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪ್ರಭುಲಿಂಗಯ್ಯ ಹಿರೇಮಠ, ವಿದ್ಯಾರ್ಥಿಗಳು ಶಿಸ್ತು ಅಳವಡಿಸಿಕೊಳ್ಳಬೇಕೆಂದರು. ತಾಪಂ ಸದಸ್ಯೆ ಕಲಾವತಿ ಚಂದ್ರಶೇಖರಗೌಡ, ಗ್ರಾಪಂ ಅಧ್ಯಕ್ಷ ಚನ್ನಪ್ಪ ಕಲ್ಮಂಗಿ, ಗ್ರಾಪಂ ಮಾಜಿ ಅಧ್ಯಕ್ಷ ವೀರಬಸನಗೌಡ ಮಾಲಿಪಾಟೀಲ್, ಬಿಆರ್‌ಸಿ ಸಮನ್ವಯ ಅಧಿಕಾರಿ ವಿರೂಪಾಕ್ಷಪ್ಪ ಹುನಗುಂದ, ಸಿಆರ್‌ಪಿ ಬಸವರಾಜ ಬಿರಾದಾರ, ಪಿಡಿಒ ದೀಪಾ ಅರಳಿಕಟ್ಟಿ, ಪ್ರೌಢಶಾಲೆಯ ಮುಖ್ಯಗುರು ರುಕಿಯಾಬೇಗಂ, ಮುಖಂಡರಾದ ಹನುಮಂತ ಗಿಂಚಿ, ವೆಂಕಟರಡ್ಡೆಪ್ಪ ಕಲ್ಲಟ್ಟಿ, ಗ್ರಾಪಂ ಸದಸ್ಯರು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಲೋಕ ಶಿಕ್ಷಣ ಸಮಿತಿಯ ಪ್ರೇರಕರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ, ಸನ್ಮಾನ: ಸಮಗ್ರ ವಲಯ ಪ್ರಶಸ್ತಿಗಳನ್ನು ಅರಳಹಳ್ಳಿಯ ಶಾಲಾ ವಿದ್ಯಾರ್ಥಿಗಳು ಪಡೆದರೆ, ದ್ವಿತೀಯ ಸ್ಥಾನವನ್ನು ವಿರೂಪಾಪೂರ ಶಾಲಾ ವಿದ್ಯಾರ್ಥಿಗಳು ಪಡೆದರು. ಇದೇ ವೇಳೆ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಶಿವರಾಜ ಯರಿಯಪ್ಪ, ಲಕ್ಷ್ಮೀ ಸಿದ್ದನಗೌಡ ಇವರನ್ನು ಸನ್ಮಾನಿಸಲಾಯಿತು.
ವಿನೋದ ಮತ್ತು ಸಂಗಡಿರು ಪ್ರಾರ್ಥಿಸಿದರು. ಮರಿಸ್ವಾಮಿ, ಬಸವರಾಜ ಹಳ್ಳಿ ಸ್ವಾಗತ ಕೋರಿದರು. ಕಮಲಮ್ಮ, ರಾಘವೇಂದ್ರ ನಿರೂಪಿಸಿದರು. ಆಂಜನೆಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement