ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

10 ಜೀವ ಉಳಿಸಿದ 'ಧೀರ'

Vishwanath S
Updated On : 29 Dec 2013, 12:19 pm

ಗುರುಮಠಕಲ್: ಬೆಂಗಳೂರಿಂದ ಯಾದಗಿರಿಗೆ ನಾಂದೇಡ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಯಾದಗಿರಿ ತಾಲೂಕು ಚಂಡರಕಿ ಗ್ರಾಮದ ನಿವಾಸಿ ಧೀರೇಂದ್ರ ಕುಲ್ಕರ್ಣಿ(26) ಕೂಡ ಅದರಲ್ಲೇ ಪ್ರಾಯಾಣಿಸುತ್ತಿದ್ದ ಘಟನೆಯಲ್ಲಿ ಯಾವುದೇ ಗಾಯಗಳಾಗದೇ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಲ್ಲದೇ ಇನ್ನು ಹಲವರ ಜೀವವನ್ನು ರಕ್ಷಿಸಿದ್ದಾರೆ.
ನಾಂದೇಡ್ ರೈಲಿಗೆ ಹತ್ತಿ ಸ್ವಲ್ಪ ದೂರ ಪ್ರಯಾಣ ಮಾಡಿದಾಗ ಎಸಿ ಕೋಚ್‌ನಲ್ಲಿ ಬೆಚ್ಚಗೆ ಗಾಳಿ ಬರಲು ಆರಂಭಿದ್ದನ್ನು ಗಮನಿಸಿದ ಇವರು ಟಿಸಿ ಬಳಿ ರಾತ್ರಿ 11.20ರ ಸುಮಾರಿಗೆ ದೂರನ್ನು ನೋಂದಾಯಿಸಿದ್ದಾರೆ.
ಬಿಸಿ ಗಾಳಿ ಬರುವ ಕುರಿತು: ಎಸಿ ಕೋಚ್‌ನಲ್ಲಿ ಬಿಸಿ ಗಾಳಿ ಬರುವ ಕುರಿತು ಹೇಳಿದ್ದರಿಂದ ಸದ್ಯ ಸಿಂಗಲ್ ಎಸಿ ಪ್ರಾರಂಭಿಸಲಾಗಿದೆ. ಸ್ವಲ್ಪ ದೂರ ಚಲಿಸಿದ ಬಳಿಕ ಸಂಪೂರ್ಣ ಎಸಿಯನ್ನು ಪ್ರಾರಂಭಿಸಲಾಗುವುದು ಎನ್ನಲಾಗಿದೆ.ರಾತ್ರಿ ಸುಮಾರು 2.30ರ ಸುಮಾರಿಗೆ ಅದೇ ಬಿ1 ಕೋಚ್‌ನಲ್ಲಿ ಅಗ್ನಿ ಕಾಣಿಸಿಕೊಂಡು ಸೀಟ್ 1ರಿಂದ ಅಗ್ನಿ ಆವರಿಸಿ ಕೋಚ್‌ನಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಒಬ್ಬರನ್ನು ಮತ್ತೊಬ್ಬರು ಗುರುತು ಹಚ್ಚಲು ಸಾಧ್ಯವಾಗದಷ್ಟು ಹೊಗೆ ಹತ್ತಿಕೊಂಡಿತ್ತು ಎಂರ್ದು ಧೀರೇಂಧ್ರ ಹೇಳಿದ್ದಾರೆ.
ಇದರಿಂದ ಭಯಭೀತಿಗೊಂಡ ಧೀರೇಂದ್ರ ಅವರ ಶೌಚಗೃಹದ ಗಾಜು ಒಡೆದು ಮುಂದಿನ ಸಾಮಾನ್ಯ ಭೋಗಿಯತ್ತ ಕೂಗ ತೊಡಗಿದಾಗ ಅದರಲ್ಲಿನ ಪ್ರಯಾಣಿಕರು ಚೈನ್ ಎಳೆದು ರೈಲನ್ನು ನಿಲ್ಲಿಸಲು ಯಶಸ್ವಿಯಾದರು.
10ರಿಂದ 12 ಜನರು ಬಚಾವ್: ರೈಲು ನಿಧಾನವಾಗಿ ನಿಲ್ಲುತ್ತಿದಂತೆ ಒಬ್ಬ ಮಹಿಳೆ ಕಿಡಕಿಯಿಂದ ಹಾರಿದರು. ತಮ್ಮ ಜೊತೆಗಿದ್ದ ಯಾದಗಿರಿ ಜಿಲ್ಲೆಯ ಸುಮಾರು 10ರಿಂದ 12 ಜನರು ಕೂಡಿ ಬದುಕುಳಿದೆವು ಎಂದು ಹೇಳಿದರು. ಈ ರೈಲು ಅವ್ಯವಸ್ಥೆಯಿಂದ ಕೂಡಿತ್ತು. ಎಸಿಯಲ್ಲಿ ಯಾವ ಸೌಕರ್ಯಗಳು ಇರಬೇಕಿತ್ತೋ ಅವು ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯ: ನಾನು ರಾತ್ರಿವೇಳೆ ಬಿಸಿ ಗಾಳಿ ಬರುತ್ತಿರುವ ಕುರಿತು ದೂರನ್ನು ನೋಂದಾಯಿಸಿದ್ದೇ, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದ್ದರೆ ಈ ಅಗ್ನಿ ಅನಾಹುತ ತಡೆಯಬಹುದಿತ್ತು ಎಂದು ಧೀರೇಂದ್ರ ಹೇಳಿದ್ದಾರೆ. ಅಧಿಕಾರಿಗಳು ನಿರ್ಲಕ್ಷ್ಯತೋರಿದ್ದರಿಂದ ಈ ಘಟನೆ ಜರುಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಅಗ್ನಿ ಅನಾಹುತದಿಂದ ತಾನು ಸೇರಿ ಇನ್ನೂ 10 ಜನರನ್ನು ಪ್ರಾಣ ಸಮೇತ ರಕ್ಷಿಸಿರುವ ಧೀರೇಂದ್ರ ಅವರ ಧೈರ್ಯ ಮೆಚ್ಚುವಂತದ್ದು, ಸಾಕಷ್ಟು ಜನರನ್ನು ತಾನು ರಕ್ಷಿಸಿದೆ. ನನ್ನ ಲ್ಯಾಪ್ಟಾಪ್, ಮೊಬೈಲ್ ಸೇರಿ 1 ಲಕ್ಷಕ್ಕೂ ಅಧಿಕ ಬೆಲೆಬಾಳುವ ವಸ್ತುಗಳನ್ನು ಕಳೆದು ಕೊಂಡಿರುವುದಾಗಿ ಹೇಳಿದ್ದಾರೆ.
ಇತ್ತೀಚೆಗೆ ಒಬ್ಬ ಮಗ ಆನಾರೋಗ್ಯದಿಂದ ನಮ್ಮನ್ನು ಅಗಲಿ ಹೋಗಿದ್ದಾನೆ. ಇನ್ನೂ ಆ ದುಖಃ ಮರೆಯೊಕೆ ಮೊದಲೇ ಈ ದುರಂತವನ್ನು ಕೇಳಿದ ನಮಗೆ ಆತಂಕ ಕಾಡತೊಡಗಿತ್ತು. ಅದೃಷ್ಟವಶಾತ್ ನಮ್ಮ ಮಗ ತನ್ನ ಜೊತೆಗೆ ಇನ್ನೂ ಸುಮಾರು ಜನರ ಪ್ರಾಣ ಉಳಿಸಿದ್ದು ಸಂತೋಷ ತಂದಿದೆ.
 ಕಿಶನರಾವ್ ಚಂಡರಕಿ
 ಧೀರೇಂಧ್ರನ ತಂದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement