ಆತ್ಮವಿಶ್ವಾಸವೇ ನಮ್ಮನ್ನು ಕಾಪಾಡಿತು
ಶಹಾಪುರ: ದಿನಾಂಕ 27-12-2013 ರಂದು ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಬೆಂಗಳೂರು ನಾಂದೇಡ್ ರೈಲು ದುರಂತದಲ್ಲಿ ಸಾವಿನದವಡೆಯಿಂದ ಪಾರಾಗಿ ಬಂದದ್ದು ನಮ್ಮ ಅದೃಷ್ಟ. ನಮ್ಮ ಆತ್ಮವಿಶ್ವಾಸವೇ ನಮ್ಮನ್ನು ಪಾರುಮಾಡಿತು ಎಂದು ಅಂಬ್ರೇಶ್ ಮಾಕಾಲ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಘಟನೆ ವಿವರ: ರಾತ್ರಿ 1.30 ರಿಂದ 2.30ರ ಸಮಯದಲ್ಲಿ ಬಿ.1 ಹವಾನಿಯಂತ್ರಿತ ಭೋಗಿಯೊಳಗೆ ಒಮ್ಮೆಲೆ ಉಸಿರು ಗಟ್ಟಿದಂತಹ ವಾತಾವರಣ ನಿರ್ಮಾಣವಾದುದ್ದು ನಮೆಗೆಲ್ಲ ಗಾಬರಿ ಹುಟ್ಟಿಸಿತು.
ಎಲ್ಲೆಂದರಲ್ಲೆ ವಿದ್ಯುತ್ ಶಾಟ್ ಸರ್ಕ್ಯಟ್ ಆಗುತ್ತಾ ಸಂಪರ್ಕ ಕಡೆದುಕೊಂಡಂತಾಯಿತು. ಆಂಧ್ರದ ಪ್ರಶಾಂತನಿಲಯದ ಪತ್ತೇಚರ್ ನಿಲ್ದಾಣದ ಸಮೀಪ ಒಮ್ಮೆಲೆ ಹಿಂದಿನ ಭೋಗಿಯೊಳಗಿನ ಜನರ ಕೂಗಾಟ ಕೇಳಿ ನಮಗೂ ಎಚ್ಚರಗೊಂಡಾಗ ನಾವು ತಂಗಿದ್ದ ಭೋಗಿಗಳಲ್ಲಿ ಬೆಂಕಿ ಆವರಿಸಿದ್ದು ಗಮನಕ್ಕೆ ಬಂದಾಗ ರೈಲಿನಲ್ಲಿದ್ದ ಲಗೇಜ್‌ಗಳನ್ನು ಬಿಟ್ಟು ಕತ್ತಲೊಳಗೆ ನಿಧಾನಗತಿಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಕೆಳಗಡೆ ಹಾರಿದ್ದು ನಮ್ಮ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿತ್ತು ಎಂದರು.
ಅದೇರೀತಿ ಹನುಮೇಗೌಡಮರ್ಕಲ್, ಬಸನಗೌಡಮರ್ಕಲ್ ಅವರು ಅದೃಷ್ಟ ವಶಾತ್ ಪಾರಾಗಿಬಂದಿದ್ದು ನಿಟ್ಟುಸಿರು ಬಿಡುವಂತಾಗಿದೆ. ಕಣ್ಣೆದುರೆ ಅದೇಷ್ಟೊ ಜೀವಗಳು ಸಜೀವ ದಹನವಾಗಿದ್ದು ಮರೆಯುವಂತಿಲ್ಲ. ಮೂವರು ಸಾವಿನ ದವಡೆಯಿಂದ ಪಾರಾಗಿಬಂದ ಅದೃಷ್ಟವಂತರು ತಮ್ಮ ಅನುಭವ ಮಾಧ್ಯಮದ ಮುಂದೆ ಹಂಚಿಕೊಂಡರು.