ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಂದಿಗೂ ಮನಸಿನಿಂದ ಮರೆಯಾಗದ ದುರ್ಘಟನೆ

Vishwanath S
Updated On : 29 Dec 2013, 12:18 pm

ಕ.ಪ್ರ. ವಾರ್ತೆ  ರಾಯಚೂರು  ಡಿ.28
ಎಲ್ಲರ ಮುಖದಲ್ಲಿ ಭೀಕರ ದುರ್ಘಟನೆ ಕಂಡು ಪಾರಾಗಿ ಬಂದ ದುಗುಡದ ಛಾಯೆ, ಭಯ, ಆತಂಕ. ರಾಯಚೂರು ತಲುಪಿ ಸಂಬಂಧಿಕರು, ಗೆಳೆಯರನ್ನು ನೋಡುತ್ತಿದ್ದಂತೆಯೇ ಆನಂದಭಾಷ್ಪ. ಜತೆಗೆ ಸಾವು ಗೆದ್ದು ಬಂದ ಸಂಭ್ರಮ.
- ನಗರಕ್ಕೆ ಶನಿವಾರ ಸಂಜೆ 5ರ ಸುಮಾರಿಗೆ ನಿಲ್ದಾಣಕ್ಕೆ ಆಗಮಿಸಿದ ಬೆಂಗಳೂರು- ನಾಂದೇಡ್ ರೈಲಿನ ಪ್ರಯಾಣಿಕರಲ್ಲಿ ಕಂಡುಬಂದ ಸಂಭ್ರಮದ ಕ್ಷಣದ ಚಿತ್ರಣ.
ಖ್ಯಾತ ತಬಲಾ ವಾದಕ ಬೆಂಗಳೂರಿನ ಪಂ. ವಿಶ್ವನಾಥ್ ನಾಕೋಡ್ ಅವರು ನಗರದಲ್ಲಿ ಆಯೋಜಿಸಿದ್ದ ಪಂ. ಸಿದ್ದರಾಮ ಜಂಬಲದಿನ್ನಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸುತ್ತಿದ್ದರು. ಅವರು ಬೆಂಗಳೂರು- ನಾಂದೇಡ್ ರೈಲಿನ ಸೆಕೆಂಡ್ ಕ್ಲಾಸ್ ಸ್ಪೀಪರ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು.
ದುರಂತದ ಬಗ್ಗೆ ಅವರು “OÚ«Ú­sÚ®ÚúڒOæQ ಅನುಭವ ಹಂಚಿಕೊಂಡು ಬೆಳಗ್ಗೆ 2.50ರ ಸುಮಾರಿಗೆ ರೈಲಿನಲ್ಲಿ ಬೆಂಕಿ ಬೆಂಕಿ ಎಂದು ಜೋರಾಗಿ ಕೂಗಿದ್ದು ಕೇಳಿಸಿತು. ಗಾಬರಿಗೊಂಡ ತಾವು ಸೇರಿದಂತೆ ಸಹ ಪ್ರಯಾಣಿಕರೆಲ್ಲರೂ ಎದ್ದು ನೋಡುತ್ತಿದ್ದಂತೆಯೇ ರೈಲು ನಿಧಾನವಾಗಿ ಸಾಗುತ್ತಿತ್ತು. ಆದರೆ ಎಲ್ಲರೂ ಬೆಂಕಿ ಬೆಂಕಿ.. ಎಂದು ಕೂಗಿಕೊಳ್ಳುತ್ತಿದ್ದದ್ದು ಭಯ ಮೂಡಿಸಿತು.
ಜೀವ ರಕ್ಷಣೆಗಾಗಿ ಹಂಬಲಿಸಿದರು..: ರೈಲು ನಿಲುಗಡೆಯಾಗುತ್ತಿದ್ದಂತೆಯೇ ಕೆಳಗಿಳಿದು ನೋಡಿದರೆ ಎಸಿ ಬೋಗಿಯಲ್ಲಿದ್ದವರು ತಮ್ಮನ್ನು ಪಾರು ಮಾಡುವಂತೆ ಬೇಡಿಕೊಳ್ಳುತ್ತಿದ್ದುದು ಕೇಳಿತೇ ವಿನಃ ಅವರನ್ನು ರಕ್ಷಿಸಲು ಯಾರಿಂದಲೂ ಅಸಾಧ್ಯ ಎಂಬಷ್ಟು ಬೆಂಕಿ ಹೊತ್ತಿಕೊಂಡಿತ್ತು. ಕಣ್ಣೆದುರಿಗೇ ಅನೇಕರು ಪ್ರಾಣ ಕಳೆದುಕೊಂಡರು. ಕೆಲವರು ಬೋಗಿಯಿಂದ ಹೊರಜಿಗಿದು ಪಾರಾದರೆ ಮತ್ತೆ ಕೆಲವರು ಜಿಗಿಯುವ ಭರದಲ್ಲಿ ಮುಳ್ಳು, ಕಲ್ಲುಗಳ ಮೇಲೆ ಬಿದ್ದಿದ್ದರಿಂದ ತೀವ್ರ ಗಾಯಗೊಂಡರು ಎಂದು ವಿವರಿಸಿದರು.
ಕೆಲ ಕಾಲ ಗೊಂದಲ: ಅದೇ ರೈಲಿನ ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಯಲ್ಲಿ ಪ್ರಯಾಣಿಸಿ ನಗರಕ್ಕೆ ಶನಿವಾರ ಸಂಜೆ ಬಂದಿಳಿದ ಬಿಜೆಪಿ ಮುಖಂಡ ಅಶೋಕ ಗಸ್ತಿ ಅವರು, “ÁæçÆ«ÚÆÇ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಎಲ್ಲರೂ ಕೂಗತೊಡಗಿದ್ದರಿಂದ ಎಚ್ಚೆತ್ತು ಬಾಗಿಲು ತೆಗೆಯಲು ಕೆಲವರು ಮುಂದಾದರು. ಆದರೆ ಮಧ್ಯರಾತ್ರಿ ವೇಳೆ ಕಳ್ಳರ ದಾಳಿಯ ಭೀತಿಯಿಂದ ಬಾಗಿಲು ತೆರೆಯಲು ಮೊದಲು ಹಿಂದೇಟು ಹಾಕಿದರು. ನಂತರ ವಾಸ್ತವ ಗೊತ್ತಾಗುತ್ತಿದ್ದಂತೆಯೇ ರೈಲಿನಿಂದ ಹೊರಗೆ ಜಿಗಿದು ¶M¥æÈÚâ’ ಎಂದು ಅನುಭವ ಹಂಚಿಕೊಂಡರು.
ಅನೇಕರ ಜೀವ ರಕ್ಷಿಸಿದ ವಾರ್ಡರ್ ಬಾಯ್: ಮತ್ತೊಬ್ಬ ಪ್ರಯಾಣಿಕ ನ್ಯಾಯವಾದಿ ರಾಜಕುಮಾರ್ 'ತಾವು ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಯಲ್ಲಿದ್ದು, ಘಟನೆ ನಡೆಯುತ್ತಿದ್ದಂತೆಯೇ ರೈಲಿನಿಂದ ಕೆಳಗಿಳಿದು ಬಂದು ನೋಡಲಾಗಿ ಎಸಿ ಬೋಗಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಂಡಿತು. ಆ ಬೋಗಿಯಲ್ಲಿದ್ದ ವಾರ್ಡರ್ ಬಾಯ್ ಎಸಿ ಬೋಗಿಯಿಂದ ಅನೇಕರು ಹೊರಬರಲು ನೆರವಾಗಿದ್ದು ಕಂಡುಬಂದಿತು.
  ಎಸಿ ಬೋಗಿಯ ಕಿಟಕಿಯ ಗಾಜು ಒಡೆದು ಆತ ಅನೇಕರನ್ನು ಹೊರಕಳಿಸುವ ಮೂಲಕ ರಕ್ಷಿಸಿದ. ಆತನ ಸಮಯಪ್ರಜ್ಞೆಯಿಂದ ಎಸಿ ಬೋಗಿಯಲ್ಲಿದ್ದ ಅನೇಕರ ಜೀವ DØ¿ß}Úß’ ಎಂದು ವಿವರಿಸಿದರು.
   ಎಸಿ ಬೋಗಿಯಲ್ಲಿದ್ದ ರೇಲ್ವೆ ವಾರ್ಡ್ ಬಾಯ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ರೈಲು ನಿಲುಗಡೆಯಾಗುತ್ತಿದ್ದಂತೆಯೇ ಇನ್ನುಳಿದ ಬೋಗಿಗಳೊಂದಿಗೆ ಎಸಿ ಬೋಗಿಗಿದ್ದ ಸಂಪರ್ಕ ಕಡಿತಗೊಳಿಸಿದ್ದು ಬೆಂಕಿ ಇನ್ನುಳಿದ ಬೋಗಿಗಳಿಗೆ ವ್ಯಾಪಿಸದಂತೆ ತಡೆದು ನೂರಾರು ಜನರ ಪ್ರಾಣಿ ಉಳಿಯಿತೆಂದು ತಿಳಿಸಿದರು.
ಒಬ್ಬರು ಸುರಕ್ಷೆ 9 ಮಂದಿ ನಾಪತ್ತೆ
ರಾಯಚೂರು: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿ ಸಮೀಪ ಬೆಂಗಳೂರು- ನಾಂದೇಡ್ ರೈಲಿನಲ್ಲಿ ಬೆಂಕಿಯಿಂದ ಹೊತ್ತಿ ಉರಿದ ಎಸಿ ಬೋಗಿಯಲ್ಲಿ ರಾಯಚೂರಿಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಅನುಮಾನಗಳೆದ್ದಿವೆ. ನಗರಕ್ಕೆ ಆಗಮಿಸುತ್ತಿದ್ದ 10 ಜನರ ಪೈಕಿ ಒಬ್ಬರು ಮಾತ್ರ ಶನಿವಾರ ಮಧ್ಯಾಹ್ನ ಸುರಕ್ಷಿತ ಬಂದು ಸೇರಿದ್ದಾರೆ. ಇನ್ನುಳಿದ 9 ಜನರ ಬಗ್ಗೆ ಜಿಲ್ಲಾಡಳಿತಕ್ಕೆ ಶನಿವಾರ ಸಂಜೆವರೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಬೆಂಕಿಗೆ ಆಹುತಿಯಾದ ರೈಲಿನ ಬೋಗಿಯಲ್ಲಿ ರಾಯಚೂರಿಗೆ ಮುಂಗಡ ಸೀಟು ಕಾಯ್ದಿರಿಸಿದ್ದ ಕೃಷ್ಣಮೂರ್ತಿ(70), ಇಬ್ರಾಹಿಂ(31), ಡಾ.ಅಸ್ರಾ(31), ರಾಹುಲ್(25), ಆರ್.ರಾಮಮೂರ್ತಿ(68), ನಾಗೇಶರಾವ್(32), ವಿಜಯಾ(63), ಪದ್ಮಿನಿ(61), ಡಾ.ನರಹರಿರಾವ್(61) ಮತ್ತು ಲಲಿತಾ(61) ಎಂಬುವವರಿದ್ದರು. ಈ ಪೈಕಿ ನಾಗೇಶರಾವ್ ಮಾತ್ರ ನಗರ ಸೇರಿದ್ದಾರೆ. ಉಳಿದ ಪ್ರಯಾಣಿಕರ ಮಾಹಿತಿ ದೊರೆತಿಲ್ಲ.
ಆತಂಕ: ಅವಘಡದ ಬಗ್ಗೆ ಶನಿವಾರ ಬೆಳಗ್ಗೆ ಗೊತ್ತಾಗುತ್ತಿದ್ದಂತೆಯೇ ನಗರದ ರೈಲು ನಿಲ್ದಾಣಕ್ಕೆ ತೆರಳಿ ವಿಚಾರಿಸಿದ ಎಲ್ಲ ಪ್ರಯಾಣಿಕರ ಸಂಬಂಧಿಕರಿಗೆ ಅಸಮರ್ಪಕ ಮಾಹಿತಿ ದೊರೆತಿದ್ದರಿಂದ ಅವರೆಲ್ಲರೂ ಘಟನಾ ಸ್ಥಳಕ್ಕೆ ತೆರಳಿದ್ದಾರೆ.  ಈ ಕುರಿತು “OÚ«Ú­sÚ®Úúڒ¥æàM¦Væ ಮಾತನಾಡಿದ ಎಸ್ಪಿ ಎಂ.ಎನ್.ನಾಗರಾಜ್, ಬೆಂಗಳೂರಿನಿಂದ ರಾಜ್ಯದ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಇದುವರೆಗೆ ರಾಯಚೂರಿನ ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ಜಿಲ್ಲಾಡಳಿತಕ್ಕಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement