ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮೌಲ್ಯ ವೃದ್ಧಿಸುವ ಶಿಕ್ಷಣ ಅವಶ್ಯ

Vishwanath S
Updated On : 29 Dec 2013, 12:20 pm

ಸಿಂಧನೂರು; ನಗರದಲ್ಲಿ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಆಫ್ ಇಂಡಿಯಾ ವತಿಯಿಂದ ಶನಿವಾರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹೃದಯಗಳನ್ನು ಬೆಳೆಸೋಣ- ಬದಲಾವಣೆಯನ್ನು ತರೋಣ ಬಲಿಷ್ಟ ರಾಷ್ಟ್ರ ಕಟ್ಟೋಣ ಎಂಬ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಯಿತು.
ರ್ಯಾಲಿಯನ್ನು ಜೆಐಎಚ್ ಅಧ್ಯಕ್ಷ ಅಬ್ದುಲ್ ರಶೀದ್ ಸಾಬ್ ಖಾಸ್ಮಿ ಉದ್ಘಾಟಿಸಿದರು. ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆಯು ಪ್ರಮುಖ ರಸ್ತೆಗಳ ಮೂಲಕ ಹಾದು ಹೋಗಿ ನಂತರ ನಗರದ ಶಾದಿಮಹಲ್ ಆವರಣದಲ್ಲಿ ಬೃಹತ್ ಸಾರ್ವಜನಿಕ ಸಭೆಯಾಗಿ ಮಾರ್ಪಟ್ಟಿತು.
ಮಾನವೀಯ ಮೌಲ್ಯ ಬೆಳೆಸಲು ಯತ್ನಿಸಿ: ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್‌ಐಒ ರಾಷ್ಟ್ರೀಯ ಅಧ್ಯಕ್ಷ ಆಶ್ಫಾಕ್ ಅಹ್ಮದ್ ಶರೀಫ ಮಾತನಾಡಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ ಎನ್ನುವುದು ಎಲ್ಲರ ಗಮನದಲ್ಲಿರುವ ವಿಷಯವಾಗಿದೆ. ಮಾನವೀಯ ಮೌಲ್ಯಗಳನ್ನು ಹುಟ್ಟುಹಾಕಲು ವಿದ್ಯಾರ್ಥಿಗಳು ಮುಂದೆ ಬರಬೇಕು. ನಮ್ಮೆಲ್ಲರಿಗೆ ಕಣ್ಣಿಗೆ ಕಾಣುವ ಹಾಗೆ ಭ್ರಷ್ಟಚಾರ ಹಾಗೂ ರಾಜಕೀಯ ಹಗರಣಗಳು ಕಾರ್ಪೋ ೇಟರ್ ವಲಯಗಳ ಅವಿಭಾಜ್ಯ ಅಂಗಗಳಾಗಿವೆ. ಇವೆಲ್ಲಾ ಕಾನೂನಿನ ಬಾಹುಗಳಿಂದ ರಕ್ಷಿಸಲ್ಪಡುತ್ತಿವೆ. ಇವುಗಳನ್ನೆಲ್ಲಾ ತಡೆಗಟ್ಟಲು ಯುವಮಿತ್ರರು ಮುಂದೆ ಬರಬೇಕೆಂದು ಕರೆ ನೀಡಿದರು.
ಮೌಢ್ಯಗಳಿಂದ ದೂರವಿರಿ: ಜಮಾಅತೆ ಇಸ್ಲಾಮ್ ಮುಖಂಡ ಲಾಲು ಹುಸೇನ್ ಕಂದಗಲ್ ಮಾತನಾಡಿ, ದೇಶದಲ್ಲಿ ಯುವ ಶಕ್ತಿ ಒಂದಾದರೆ ಸುಂದರವಾದ ದೇಶ ಕಟ್ಟಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಯುವಕರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಪ್ರಗತಿಯತ್ತ ದೇಶ ಕಟ್ಟಬೇಕು. ಜೊತೆಗೆ ಮೂಢನಂಬಿಕೆ, ಮೌಢ್ಯತೆಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.
ರಾಜ್ಯಾಧ್ಯಕ್ಷ ತೌಸೀಫ್ ಅಹ್ಮದ್, ಶಾಂತಿ ಪ್ರಕಾಶನ ವ್ಯವಸ್ಥಾಪಕ ಮುಹಮದ್ ಕುಂಇ, ನಗರಸಭೆ ಅಧ್ಯಕ್ಷ ಸೈಯದ್ ಜಾಫರ್‌ಅಲಿ ಜಾಗೀರದಾರ, ಹೈ-ಕ ಹೋರಾಟ ಸಮಿತಿಯ ರಝಾಕ್ ಉಸ್ತಾದ್, ಶಿಕ್ಷಕ ಸೋಮಲಿಂಗಪ್ಪ ತುರ್ವಿಹಾಳ, ಜ್ಞಾನಜ್ಯೋತಿ ಕಾಲೇಜಿನ ಪ್ರಾಚಾರ್ಯ ವಿಷ್ಣುವರ್ಧನ್ ರೆಡ್ಡಿ, ಜೆಐಎಚ್ ವಿಭಾಗೀಯ ಸಂಚಾಲಕ ಮಹ್ಮದ್ ಅನ್ವರ್ ಹುಸೇನ, ಎಸ್‌ಐಒ ತಾಲೂಕಾಧ್ಯಕ್ಷ ಮಹ್ಮದ್ ಅಲಿ ಮುರ್ತುಜಾ, ಕಾರ್ಯದರ್ಶಿ ಜಾಕೀರ ಉಪಸ್ಥಿತರಿದ್ದರು. ಸಂಚಾಲಕ ಸೈಯದ್ ತನ್ವೀರ್, ಡಾ. ತಾಹೀರ ಅಲಿ, ಹುಸೇನಸಾಬ್, ಕಾರ್ಯದರ್ಶಿ ವೆನಿಮ್, ಮುಖಂಡ ವಾಸೀಮ್ ಹಾಗೂ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಗುವಿವಿ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಸಿಂಧನೂರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement