ಕ್ಯಾಲೆಂಡರ್ ಬಿಡುಗಡೆ, ಸನ್ಮಾನ ಸಮಾರಂಭ
ಕ.ಪ್ರ. ವಾರ್ತೆ, ರಾಯಚೂರು, ಡಿ.30
ನಗರದಲ್ಲಿ ಈಚೆಗೆ ಜಿಲ್ಲಾ ವಿಪ್ರ ನೌಕರರ ಕ್ಷೇಮಾಭೀವೃದ್ಧಿ ಸಂಘದ ಜಿಲ್ಲಾ ಘಟಕದಿಂದ 2014ನೇ ವರ್ಷದ ವರ್ಣಮಯ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕಾನೂನು ಸಲಹೆಗಾರ ವಸಂತರಾವ್ ಬಾಗಲವಾಡ ಉದ್ಘಾಟಿಸಿದರು. ಕ್ಯಾಲೆಂಡರ್ರನ್ನು ಪಂ.ಮುರಳೀಧರಾಚಾರ್ಯ ಗಲಗಲಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಶೇಷಗಿರಿರಾವ್ ಕುಲಕರ್ಣಿ ವಹಿಸಿದ್ದರು.
ಅತಿಥಿಗಳಾಗಿ ಬ್ರಾಹ್ಮಣ ಸಮಾಜದ ಮುಖಂಡರಾದ ನರಸಿಂಗರಾವ್ ದೇಶಪಾಂಡೆ, ಪ್ರಾಣೇಶ ಮುತಾಲಿಕ್, ಶಾರದಾ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ಡಿ.ಕೆ. ಮುರಳೀಧರ, ಗೋಪಾಲದಾಸ ದೇವದುರ್ಗ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಡಿ. ವೆಂಕಟೇಶ ಸ್ವಾಗತಿಸಿದರು. ವೆಂಕಟೇಶ ನವಲಿ ಪ್ರಧಾನ ಕಾರ್ಯದರ್ಶಿ ಪ್ರಾಸ್ತವಿಕ ಮಾತನಾಡಿದರು. ವಿಶೇಷ ಉಪನ್ಯಾಸವನ್ನು ಡಾ. ರಾಜಶ್ರೀ ಕಲ್ಲೂರಕರ ನೀಡಿದರು. ತಹಸೀಲ್ದಾರ್ ಅಶೋಕ ಜಹಗೀರದಾರ ಮತ್ತಿತರರಿದ್ದರು. ಸಂಘದ ವತಿಯಿಂದ ನೀಡುವ ಚಾಣುಕ್ಯ ಪುರಸ್ಕಾರವನ್ನು ಜಿಪಂ ಸಿಇಒ ಮುದ್ದುಮೋಹನ್ ಅವರಿಗೆ ಪ್ರದಾನ ಮಾಡಲಾಯಿತು. ಕಾತ್ಯಾಯನಿ ಪುರಸ್ಕಾರವನ್ನು ಡಾ. ಶೀಲಾದಾಸ್ ಅವರಿಗೆ ನೀಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಸಿ.ಎನ್. ಕುಲಕರ್ಣಿ, ರಾಘವೇಂದ್ರ ಕುಷ್ಟಗಿ, ಶ್ಯಾಮರಾವ್ ಹೇಮನೂರು, ರುಕ್ಮಿಣಿಬಾಯಿ, ರಾಘವೇಂದ್ರ ಚೂಡಾಮಣಿ, ಕು. ಸಾಧನಾ ಮುತಾಲಿಕ್ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಗುರುರಾಜ ದೇಶಪಾಂಡೆ, ಮನೋಹರರಾವ್, ರೂಪಾ ಬಂಡಿ, ನರಸಿಂಹಮೂರ್ತಿ, ಸೇರಿ ಅನೇಕರಿದ್ದರು.