ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಡಿತರ ವಿತರಣೆಗೆ ಆಗ್ರಹಿಸಿ ದಂಡೋರಾ ಸಮಿತಿ ಒತ್ತಾಯ

Lingaraj Badiger
Updated On : 2 Feb 2013, 11:19 am

ರಾಯಚೂರು: ತಾಲೂಕಿನ ಶಕ್ತಿನಗರ ಹಾಗೂ ದೇವಸೂಗೂರು ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸಂಚರಿಸುತ್ತಿದ್ದ ಪಡಿತರ ವಿತರಣೆ ಸಂಚಾರಿ ವಾಹನವನ್ನು ರದ್ದುಗೊಳಿಸಿರುವುದನ್ನು ಖಂಡಿಸಿರುವ ಮಾದಿಗ ದಂಡೋರಾ, ಕೂಡಲೇ ಪುನಾ ವಾಹನದ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
  ಈ ಕುರಿತು ಆಹಾರ ಇಲಾಖೆಗೆ ದೂರು ಸಲ್ಲಿಸಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಸಿಂಗನೋಡಿ, ಈ ಎರಡೂ ಗ್ರಾಮಗಳಲ್ಲಿ ಸಂಚರಿಸುತ್ತಿದ್ದ ಸಂಚಾರಿ ಪಡಿತರ ವಿತರಣೆ ವಾಹನವನ್ನು ಕೆಲ ರಾಜಕೀಯ ವ್ಯಕ್ತಿಗಳು ರದ್ದುಗೊಳಿಸುವಂತೆ ಮಾಡಿದ್ದಾರೆ. ಅದರಿಂದ ಜನತೆಗೆ ತೊಂದರೆಯಾಗಿದ್ದು ಕೂಡಲೇ ಆ ವಾಹನದ ಮೂಲಕವೇ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement