ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪತ್ರಿಕಾ ಕಚೇರಿ ಮೇಲೆ ದಾಳಿಗೆ ಖಂಡನೆ

Lingaraj Badiger
Updated On : 2 Feb 2013, 11:19 am

ರಾಯಚೂರು: ರಾಜ್ಯದ ವಿವಿಧೆಡೆ ಪತ್ರಕರ್ತರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅದೇ ರೀತಿ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುವರ್ಣ ನ್ಯೂಸ್ ವಾಹಿನಿಯ ಕಚೇರಿಯಲ್ಲಿ ದಾಂಧಲೆ ನಡೆಸಿದ ಘಟನೆ ಖಂಡಿಸಿ ನಗರದಲ್ಲಿ ಶುಕ್ರವಾರ ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ ಬೆಳಗಾವಿಯಲ್ಲಿ ಪತ್ರಕರ್ತರಾದ ಶ್ರೀಕಾಂತ, ಮಹಾಂತೇಶ್ ಯಲ್ಲಾಪುರಮಠ ಅವರ ಮೇಲೆ ವರದಿಗಾರಿಕೆಗೆ ತೆರಳಿದ ವೇಳೆ ಹಲ್ಲೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸುವರ್ಣ ನ್ಯೂಸ್ ಪತ್ರಿಕಾ ಕಚೇರಿ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ರಾಜ್ಯ ಸರ್ಕಾರ ಮಾಧ್ಯಮದವರ ಮೇಲೆ ಹಲ್ಲೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪತ್ರಿಕಾ ಕಚೇರಿಗಳಿಗೆ ತೆರಳಿ ದಾಂಧಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೀಮರಾಯ ಹದ್ದಿನಾಳ, ದತ್ತು ಸರ್ಕಿಲ್, ಮೋಮಿನ್ ಸಾಬ್, ಬಸವರಾಜ ನಾಗಡದಿನ್ನಿ, ಗುರುರಾಜ್ ಹೂಗಾರ್, ಗುರುನಾಥ್, ಶಿವಮೂರ್ತಿ, ವೀರಾರೆಡ್ಡಿ, ರಂಗನಾಥ್, ದುರ್ಗೇಶ್,ಸಿದ್ದು ಬಿರಾದಾರ್,ಉಪೇಂದ್ರ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement