ಪೌಷ್ಟಿಕ ಆಹಾರ ಬಳಕೆಗೆ ಸಲಹೆ
ದೇವದುರ್ಗ: ತಾಲೂಕಿನ ಮಕ್ಕಳಲ್ಲಿ ಕಂಡು ಬಂದ ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಮಕ್ಕಳಿಗೆ ವಿವಿಧ ರೀತಿಯ ಪೌಷ್ಟಿಕ ಆಹಾರ ನೀಡುತ್ತಿದ್ದು, ತಾಯಂದಿರು ಸದುಪಯೋಗ ಪಡೆದುಕೊಳ್ಳುವಂತೆ ನಾಗಡದಿನ್ನಿ ಗ್ರಾ.ಪಂ. ಅಧ್ಯಕ್ಷೆಬೂದೆಮ್ಮ ಹೆಗ್ಗಡದಿನ್ನಿ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ನಾಗಡದಿನ್ನಿ ಅಂಗನವಾಡಿ ಕೇಂದ್ರ 3ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಡಿಮೆ ಮತ್ತು ಅತೀ ಕಡಿಮೆ ತೂಕದ ಮಕ್ಕಳಿಗೆ ಹಾಲು, ಮೊಟ್ಟೆ ವಿತರಿಸಿ ಮಾತನಾಡಿದರು.
ಹೈ.ಕ. ವಿಮೋಚನಾ ವೇದಿಕೆ ಅಧ್ಯಕ್ಷ ರಾಮಣ್ಣ ಎನ್. ಗಣೇಕಲ್ ಮಾತನಾಡಿ, ಸರ್ಕಾರ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಮತ್ತು ಮಕ್ಕಳಲ್ಲಿರುವ ಅಪೌಷ್ಟಿಕತೆ ನಿವಾರಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಸಮುದಾಯ ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯೆ ಬಷೀರಾ ಬೇಗಂ, ಉಮೇಶಗೌಡ, ಬಸವರಾಜಗೌಡರು, ಶಿವಕುಮಾರ ಹೆಗ್ಗಡದಿನ್ನಿ, ಮಲ್ಲಿಕಾ, ಲಕ್ಷ್ಮೀ ಕಬ್ಬೇರ, ಕಾರ್ಯಕರ್ತೆ ಅನುಷಾ ಪಾಟೀಲ್, ದುರುಗಮ್ಮ ನಾಯಕ, ನಿರ್ಮಲಾ ಪಾಟೀಲ್ ಸೇರಿ ಅನೇಕರಿದ್ದರು.