ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ರಾಜಕೀಯ ಪ್ರಬುದ್ಧತೆ ಗೊಂದಲದಲ್ಲಿ ಶಿವನಗೌಡ'

Lingaraj Badiger
Updated On : 2 Feb 2013, 11:14 am

ದೇವದುರ್ಗ: ರಾಜಕೀಯ ಪ್ರಬುದ್ಧತೆಯ ಕೊರತೆಯಿಂದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಶಿವನಗೌಡ ನಾಯಕ ಬಿಜೆಪಿ-ಕೆಜೆಪಿ ಪಕ್ಷಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಗೊಂದಲದಲ್ಲಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಸಂತಕುಮಾರ್ ಟೀಕಿಸಿದರು.
ಅವರು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವನಗೌಡ ನಾಯಕ್ ಆಕಸ್ಮಿಕವಾಗಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲ. ಹೀಗಾಗಿ ಅವರು ಸದ್ಯ ಭವಿಷ್ಯದ ಬಗ್ಗೆ ಗೊಂದಲದಲ್ಲಿ ಸಿಲುಕಿದ್ದಾರೆಂದು ಲೇವಡಿ ಮಾಡಿದರು.
ಕಾಂಗ್ರೆಸ್ಗೆ ಶಿವನಗೌಡರನ್ನು ಆಹ್ವಾನಿಸಲಾಗಿದೆ ಎಂಬುದು ಸುಳ್ಳು. ತಮ್ಮ ಪ್ರತಿಷ್ಠೆಗಾಗಿ ಬೇರೆಯವರ ಹೆಸರು ಬಳಕೆ ಮಾಡಿಕೊಳ್ಳುವುದು ಸರಿಯಾದ ಕ್ರಮವಲ್ಲ. ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮುಂದಿನ ಶಾಸಕರಾಗಿ ಕಾಂಗ್ರೆಸ್ ಪಕ್ಷದವರು ಆಯ್ಕೆಯಾಗಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ದೇವದುರ್ಗಕ್ಕೆ ಸ್ಪರ್ಧಿಸಲು 4 ಅರ್ಜಿಗಳು ಆಕಾಂಕ್ಷಿಗಳಿಂದ ಬಂದಿದ್ದು, ಮಾಜಿ ಸಂಸದ ಎ. ವೆಂಕಟೇಶ ನಾಯಕ ಅವರಿಗೂ ಹೈಕಮಾಂಡ್ ಸ್ಪರ್ಧೆಗೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಅದೇ ರೀತಿ ಬಿ.ವಿ. ನಾಯಕ, ಬಸಯ್ಯ ಶಾಖೆ, ಕರೆಮ್ಮ ಗೋಪಾಲಕೃಷ್ಣ ಅವರೂ ಅರ್ಜಿ ಸಲ್ಲಿಸಿದ್ದಾರೆಂದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಕೆ. ಶರಣಪ್ಪ, ರಾಜ್ಯ ಯುವ ಮುಖಂಡ ಬಿ.ವಿ. ನಾಯಕ, ಎಸ್ಟಿ ಘಟಕದ ಅಧ್ಯಕ್ಷ ತಾಯಣ್ಣ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ, ಬಸವರಾಜ ರೆಡ್ಡಿ, ಹುಸೇನಸಾಬ ನೀಲವಂಜಿ, ಅಮರೇಶ ಅಬಕಾರಿ, ಪುರಸಭೆ ಉಪಾಧ್ಯಕ್ಷ ಲಕ್ಷ್ಮಣ ಗೋಸಲ, ತಾಲೂಕ ಯುವ ಅಧ್ಯಕ್ಷ ಶೇಖ್ ಮುನ್ನಾಭಾಯಿ, ಭೀಮರಾಯ ಭೂಮನಗುಂಡ, ಗಂಗಪ್ಪಯ್ಯ ಪೂಜಾರಿ, ಶಂಕರಪ್ಪ, ಮಹ್ಮದ ಫಾರುಖ್, ವೆಂಕಟೇಶ ಮಕ್ತಲ್, ಲಕ್ಷ್ಮಣ ಜ್ಯೋತಿ, ಪುರಸಭೆ ಸದಸ್ಯರಾದ ಪ್ರಭು ಗದ್ಗಿ, ರವಿ ಪಾಟೀಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement