ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಇಒ, ಶಿಕ್ಷಕರಿಗೆ ಸನ್ಮಾನ

Lingaraj Badiger
Updated On : 4 Feb 2013, 12:27 pm

ಲಿಂಗಸ್ಗೂರು: ಗುಲ್ಬರ್ಗ ವಿಭಾಗ ಮಟ್ಟದ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಉತ್ತಮ ಕಾರ್ಯ ನಿರ್ವಹಿಸಿದ ಶಿಕ್ಷಕರನ್ನು ಗುರುತಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಸೈಯದ್ ಅಬ್ದುಲ್ ರಬ್ ಹಾಗೂ ಅಪರ ಆಯುಕ್ತರ ಕಾರ್ಯಾಲಯದ ನಿರ್ದೇಶಕ ಎ. ರುದ್ರಪ್ಪ ಸನ್ಮಾನಿಸಿದ್ದಾರೆ.
ಕಳೆದ 2011-12ನೇ ಸಾಲಿನ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಉತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು ಪ್ರಶಂಸಿಸಲು ವಿಭಾಗ ಮಟ್ಟದ ಆಯ್ಕೆ ಸಮಿತಿ ರಚಿಸಲಾಗಿತ್ತು. ಆಯ್ಕೆಗೊಂಡ ವಿವಿಧ ಜಿಲ್ಲೆಗಳ ಒಟ್ಟು 13 ಜನ ಅಧಿಕಾರಿಗಳು ಹಾಗೂ ಶಿಕ್ಷಕರ ಪೈಕಿ ಲಿಂಗಸ್ಗೂರು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಪೊಲೀಸ್ ಪಾಟೀಲ್ ಹಾಗೂ ಬಿಆರ್‌ಪಿ ನಾಗಪ್ಪ ಬೋರಾವತ್ ಅವರ ಸಾಧನೆ ಗುರುತಿಸಿ ಫೆ.1ರಂದು ಗುಲ್ಬರ್ಗದ ವಿಜಯ ವಿದ್ಯಾಲಯ ಪ್ರೌಢಶಾಲೆಯಲ್ಲಿ ಜರುಗಿದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement