ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೀರನಗೌಡರಿಗೆ ವಿಭಾಗೀಯ ಉತ್ತಮ ಐಇಆರ್‌ಟಿ ಪ್ರಶಸ್ತಿ

Lingaraj Badiger
Updated On : 4 Feb 2013, 12:28 pm

ಸಿಂಧನೂರು: ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಕೊಡಮಾಡುವ 2011- 12ನೇ ಸಾಲಿನ ವಿಭಾಗ ಮಟ್ಟದ ಉತ್ತಮ ಐಇಆರ್‌ಟಿ ಪ್ರಶಸ್ತಿಗೆ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಐಇಆರ್‌ಟಿ ಆಗಿ ಕಾರ್ಯನಿರ್ವಹಿಸುತ್ತಿರುವ ವೀರನಗೌಡರು ಭಾಜನರಾಗಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಅಧಿಕಾರಿಗಳಾದ ಪ್ರಾಂಶುಪಾಲರು, ಡಯಟ್ ಉಪನ್ಯಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿ, ಸಮನ್ವಯಾಧಿಕಾರಿ, ಬಿಆರ್‌ಪಿ, ಐಇಆರ್‌ಟಿ, ಸಿಆರ್‌ಪಿಗಳಿಗೆ ಗುಲ್ಬರ್ಗ ವಿಭಾಗ ಮಟ್ಟದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದು ವೀರನಗೌಡರಿಗೆ ಲಭಿಸಿದೆ. ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಫೆ.1ರಂದು ಗುಲ್ಬರ್ಗದಲ್ಲಿ ಜರುಗಿದ ವಿಭಾಗ ಮಟ್ಟದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದು, ಪ್ರಶಸ್ತಿಯು 5 ಸಾವಿರ ನಗದು ಮತ್ತು ಮತ್ತು ಪ್ರಶಸ್ತಿ ಪತ್ರ ನೀಡಲಾಗಿದೆ.
ಈ ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯಕ್ತರಾದ ಸೈಯದ್ ಅಬ್ದುಲ್ ರಬ್, ಆಯುಕ್ತರ ಕಚೇರಿಯ ನಿರ್ದೇಶಕ ಎ.ರುದ್ರಪ್ಪ, ಸಹ ನಿದೇಶಕರಾದ ಸಿ.ವಿ. ಹಿರೇಮಠ, ಎಂ.ಎಚ್. ಡೋಣೂರ ಮತ್ತು ಗುಲ್ಬರ್ಗ ಸಿಟಿಇ ಕೇಂದ್ರದ ಪ್ರಾಂಶುಪಾಲರಾದ ಡಾ. ಬಾಲರಾಜ ಉಪಸ್ಥಿತರಿದ್ದರು.
ಅಭಿನಂದನೆ: ಇವರ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ವೃಷಭೇಂದ್ರಯ್ಯ ಸ್ವಾಮಿ, ಬಿಆರ್‌ಸಿ ಸಮನ್ವಯಾಧಿಕಾರಿ ವಿರುಪಾಕ್ಷಪ್ಪ ಎಂ. ಹುನುಗುಂದ, ಸಿಆರ್‌ಪಿ, ಬಿಆರ್‌ಪಿ ಹಾಗೂ ತಾಲೂಕಿನ ಸಮಸ್ತ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement