ವಿದ್ಯಾರ್ಥಿಗಳೊಂದಿಗೆ ಸುಧಾನುವಾದ ಚರ್ಚೆಯಲ್ಲಿ...
ರಾಯಚೂರು: ನಗರದ ಜಿಲ್ಲಾ ಯಾದವ ಸಂಘದ ಮೈದಾನದಲ್ಲಿ ನಡೆಯುತ್ತಿರುವ ಪೇಜಾವರ ಮಠದ 31ನೇ ಮನ್ಯಾಯ ಸುಧಾಮಂಗಳ ಮಹೋತ್ಸವದಲ್ಲಿ ಸೋಮವಾರ ಪೇಜಾವರ ಮಠದ ವಿದ್ಯಾರ್ಥಿಗಳು ಮನ್ಯಾಯ ಸುಧಾ ಅನುವಾದದ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಾನ್ನಿಧ್ಯ ವಹಿಸಿದ್ದ ಉತ್ತರಾದಿ ಮಠದ ಸತ್ಯಾತ್ಮತೀರ್ಥರು, ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥರು, ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಅನೇಕ ಮಠಗಳ ಮಠಾಧೀಶರು ವಹಿಸಿದ್ದು ವಿದ್ಯಾರ್ಥಿಗಳ ಜತೆ ಮನ್ನಾಯ ಸುಧಾನುವಾದದಲ್ಲಿ ಸಂವಾದ ನಡೆಸಿದರು. ಈ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.