ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮನೆಗಳ ಅನುಮೋದನೆಗೆ ಗ್ರಾಪಂ ಸದಸ್ಯರ ತಕರಾರು

Lingaraj Badiger
Updated On : 8 Feb 2013, 10:46 am

ಲಿಂಗಸ್ಗೂರು: ತಾಲೂಕಿನ ಮಾವಿನಬಾವಿ ಗ್ರಾಮ ಪಂಚಾಯ್ತಿಗೆ ಹೆಚ್ಚುವರಿ (ಐಎವೈ) ಮನೆಗಳಿಗೆ ಅನುಮೋದನೆ ನೀಡಬಾರದೆಂದು ಗ್ರಾಪಂ ಸದಸ್ಯರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಮಾವಿನಬಾವಿ ಗ್ರಾಪಂಗೆ ಕಳೆದ 2012-13 ನೇ ಸಾಲಿಗೆ ಹೆಚ್ಚುವರಿ 200 ಮನೆಗಳನ್ನು ನೀಡಲಾಗಿದ್ದು, ಆದರೆ ಗ್ರಾಪಂ ಅಧಿಕಾರಿಗಳು ಗ್ರಾಮ ಸಭೆ ಅಪೂರ್ಣಗೊಳಿಸಿದ್ದು, ಅಲ್ಲದೆ ಸಾಮಾನ್ಯ ಸಭೆ ನಡೆಸದೆ ತರಾತುರಿಯಲ್ಲಿ ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಿಯಮ ಬಾಹಿರವಾಗಿದೆ ಮನೆಗಳ ಪಟ್ಟಿ ತಯಾರಿಸಲಾಗಿದೆ.
 ಸದರಿ ಮನೆಗಳ ಪಟ್ಟಿಗೆ ಅನುಮೋದನೆ ನೀಡಬಾರದು ಹಾಗೂ ವಸತಿ ನಿಯಮದ ಪ್ರಕಾರ ಮನೆಗಳ ಅನುಷ್ಠಾನ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಪರಸಪ್ಪ, ಗ್ರಾಪಂ ಸದಸ್ಯರಾದ ಚಿದಾನಂದಪ್ಪ, ಶಿವಪ್ಪ, ಸಂಜೀವಪ್ಪ, ವೆಂಕಟೇಶ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement