ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಕಚ್ಚಾಟದಿಂದ ಬಂದ ನಿರಾಶಾದಾಯಕ ಬಜೆಟ್: ಕೆ. ವಿರುಪಾಕ್ಷಪ್ಪ ಆರೋಪ

Lingaraj Badiger
Updated On : 9 Feb 2013, 10:57 am

ಸಿಂಧನೂರು: ರಾಜ್ಯದಲ್ಲಿ ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಭಾರತೀಯ ಜನತಾ ಪಕ್ಷ ಆಂತರಿಕ ಕಚ್ಚಾಟದಿಂದಾಗಿ ಜನತೆ ನಿರೀಕ್ಷಿಸಿದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆಡಳಿತದಲ್ಲಿನ ಕುಸಿತದಿಂದಾಗಿ ಆದಾಯಕ್ಕಿಂತ ಸಾಲದ ಹೊರೆ ರಾಜ್ಯದ ಜನತೆ ಅನುಭವಿಸಬೇಕಾಗಿದೆ.
 ಇದೊಂದು ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಂಸದ ಹಾಗೂ ಬಿಎಸ್‌ಆರ್ ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ. ವಿರುಪಾಕ್ಷಪ್ಪ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಮಠ- ಮಾನ್ಯಗಳಿಗೆ ಹಣ ಕೊಡುವ ಕೆಟ್ಟ ಪರಂಪರೆ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ.  ಇದು ಮಠಗಳನ್ನು ರಾಜಕೀಕರಣಗೊಳಿಸುವ ಉದ್ದೇಶ ಹೊಂದಿದೆ.   ಅಲ್ಪಸಂಖ್ಯಾತ, ಕ್ರಿಶ್ಚಿಯನ್, ವೀರಶೈವ ಮಠಗಳು ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ಪಡೆದು ಈಗಾಗಲೇ ನಿತ್ಯ ದಾಸೋಹವನ್ನು ನಡೆಸುತ್ತಿವೆ. ಈ ಬಜೆಟ್‌ನಲ್ಲಿ ವಿವಿಧ ಧಾರ್ಮಿಕ ಸಂಸ್ಥೆಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿರುವುದು ಆಯಾ ವರ್ಗದವರ ಮತ ಸೆಳೆಯುವ ಷಡ್ಯಂತ್ರ. ವಿವಿಧ ಜಾತಿಗಳ ಮಠಾಧೀಶರನ್ನು ಓಲೈಸುವ ಕಸರತ್ತು ಇಲ್ಲಿದೆ ಎಂದು ಟೀಕಿಸಿದರು.
ಜನತೆ ಕಂಗಾಲು: ರಾಜ್ಯದಲ್ಲಿ ಈಗಾಗಲೇ ಅನಿಯಮಿತ ಲೊಡ್ ಶಡ್ಡಿಂಗನ್ನು ಸರ್ಕಾರ ಹೇರಿರುವುದರಿಂದ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
 ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಈಗ ಯಡಿಯೂರಪ್ಪನವರ ಕೆಜೆಪಿ ಪಕ್ಷಕ್ಕೆ ಸೇರಿದ್ದರಿಂದ ಜನತೆ ಕಂಗಾಲಾಗಿದ್ದಾರೆ. ವಿದ್ಯುತ್ ಇಲಾಖೆಗೆ ಯಾರೂ ದಿಕ್ಕಿಲ್ಲದಂತಾಗಿರುವುರಿಂದ ವಿದ್ಯುತ್ ಉತ್ಪಾದನೆಯ ಕುರಿತು ಬಜೆಟ್‌ನಲ್ಲಿ ನಿಖರ ಯೋಜನೆಗಳು ಪ್ರಸ್ತಾಪವಾಗಿಲ್ಲವೆಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ವಿರುಪಾಕ್ಷಪ್ಪ ಉತ್ತರಿಸಿದರು.
2007-08 ರಲ್ಲಿ ರಾಜ್ಯದಲ್ಲಿ 63 ಸಾವಿರ ಕೋಟಿ ಸಾಲ ರಾಜ್ಯ ಸರ್ಕಾರದ ಮೇಲಿತ್ತು. ಪ್ರಸ್ತುತ 1.18 ಸಾವಿರ ಕೋಟಿ ಸಾಲದ ಹೊರೆ ಬಿದ್ದಿದೆ. ಇದನ್ನು ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಇದೊಂದು ಕೆಟ್ಟ ಸರ್ಕಾರದ ಕೆಟ್ಟ ಬಜೆಟ್ ಆಗಿದೆ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement