ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹೈ-ಕ ಅಭಿವೃದ್ಧಿಗೆ ರು. 3700 ಕೋಟಿ: ವಜ್ಜಲ್ ಹರ್ಷ

Parashurama
Updated On : 10 Feb 2013, 10:51 am

ಮುದಗಲ್: ಸ್ವಾತಂತ್ರ ಸಿಕ್ಕು 64 ವರ್ಷಗಳಲ್ಲಿ ಕಾಣದ ಲಿಂಗಸ್ಗೂರು ತಾಲೂಕಿನ ಅಭಿವೃದ್ಧಿಯನ್ನು ಕೇವಲ ಐದು ವರ್ಷಗಳಲ್ಲಿ ಮಾಡಿದ್ದೆನೆ ಎಂದು ಶಾಸಕ ಮಾನಪ್ಪ ವಜ್ಜಲ್ ಘೋಷಿಸಿದರು. ಸ್ಥಳೀಯ ಪಟ್ಟಣದಲ್ಲಿ ಪದ್ಮಾವತಿ ಬಾಯಿ ರಾಘವೇಂದ್ರ ರಾವ್ ದೇಶಪಾಂಡೆ ಪಿಕಳಿಹಾಳ ಸರ್ಕಾರಿ ಪದವಿ ಕಾಲೇಜ್ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗುರಿ: ಇನ್ನೂ ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅಭಿವೃದ್ಧಿಯ ಗುರಿ ಹೊಂದಿದೆ ಎಂದರು. 371ನೇ ಕಲಂ ಜಾರಿಯಾದ ನಂತರ ಹೈ.ಕಕ್ಕೆ ರಾಜ್ಯ ಸರ್ಕಾರ 3700 ಕೋಟಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದು ಈ ಭಾಗದ ಜನರಿಗೆ ಸಂತೋಷ ತಂದಿದೆ ಎಂದರು.
ಮುಂದಿನ ದಿನಗಳಲ್ಲಿ ಹಾಸ್ಟೇಲ್‌ಗಳು ಮತ್ತು ನೂತನ ಕಟ್ಟಡಗಳಿಗೆ ಆದ್ಯತೆ ನೀಡುವುದಾಗಿ ಸಚಿವರು ಭರವಸೆ ನೀಡಿದ್ದು, ಇನ್ನೂ ಎರಡು ತಿಂಗಳಲ್ಲಿ ನಂದವಾಡಗಿ ಏತ ನೀರಾವರಿ ಕಾಮಗಾರಿ ಸರ್ವೇಕಾರ್ಯ ಮುಗಿಯಲಿದ್ದು ಕಾಮಗಾರಿಗೆ ಶೀಘ್ರ ಪೂಜೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
 ಇದಕ್ಕೂ ಮುಂಚೆ ಕಾಲೇಜ್ ಕಟ್ಟಡದ ಭೂಧಾನಿ ಡಾ.ಗುರುರಾಜ ದೇಶಪಾಂಡೆ ಮಾತನಾಡಿ, ಯಾವುದೇ ಕಾರ್ಯಕ್ರಮ ನಿರ್ವಹಿಸುವಾಗ ಜವಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದರು.
ಶಿಕ್ಷಣ ನೀಡುವ ಶಾಲಾ ಕಾಲೇಜ್‌ಗಳಲ್ಲಿ ರಾಜಕೀಯ ಮಾಡದೆ ಉತ್ತಮ ದಾರಿಯಿಂದ ನಡೆದುಕೊಂಡು ಇತರರಿಗೆ ಮಾರ್ಗದರ್ಶನ ನೀಡುವಂತಾಗಬೇಕೆಂದು ತಿಳಿಸಿದರು.
 ಪ್ರಾಚಾರ್ಯ ಚಿಲ್ಕರಾಗಿ ಅವರು ಮಾತನಾಡಿದರು.
 ಈ ಸಂದರ್ಭದಲ್ಲಿ ಪ್ರಾಚಾರ್ಯ ಬಸವರಾಜ ಕಟ್ಟಿಮನಿ, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ಉಪಾಧ್ಯಕ್ಷ ಎಸ್.ಆರ್.ರಸೂಲ್, ಪಟ್ಟಣ ಪಂಚಾಯತಿ ಅಧ್ಯಕ್ಷೆ ಶರಣಮ್ಮ ಪಂಪಯ್ಯ ಮಠ, ಮುಖ್ಯಾಧಿಕಾರಿ ಎಂ.ವಿಜಯಲಕ್ಷ್ಮೀ, ಅಮಿರಬೇಗ ಉಸ್ತಾದ, ಚಂದಾವಲಿ ಸಾಬ, ಆನಂದ ಪೇಂಟರ್, ವೆಂಕಟೇಶ ಹಿರೆಮನಿ, ಮಹಾಂತಗೌಡ ಭಯ್ಯಾಪುರ, ಡಿ.ವಾಯ್.ಎಸ್.ಪಿ.ಸೂರ್ಯವಂಶಿ, ಶರಣಪ್ಪ ಗೌಂಡಿ  ವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಶಿಕ್ಷಕ ನಾಗೇಶ ಸ್ವಾಗತಿಸಿ, ಕೊನೆಯಲ್ಲಿ ಪ್ರಾಧ್ಯಾಪಕ ಶಶಿಧರ ಕಟಿಗೇರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments