ವರ್ಗಾವಣೆಯಾದರೂ ಬಿಡುಗಡೆಆಗದ ಕಂದಾಯ ಅಧಿಕಾರಿಗಳು
ಸಿಂಧನೂರು: ಆಡಳಿತದ ಹಿತದೃಷ್ಟಿಯಿಂದ ತಕ್ಷಣ ಜಾರಿಗೆ ಬರುವಂತೆ ಆದೇಶಿಸಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳನ್ನು ಸರ್ಕಾರ ಅಧೀನ ಕಾರ್ಯದರ್ಶಿ ಲಿಂಗಸ್ಗೂರು ಉಪವಿಭಾಗದ ಕಾರ್ಯಲಯದಲ್ಲಿ ದ್ವಿ.ದ.ಸ. ಕೆ.ಬಾನುಮತಿ ಅವರು ವರ್ಗಾವಣೆ ಮಾಡಿದ್ದರೂ ಸಹ ಬಿಡುಗಡೆಆಗಿರುವುದಿಲ್ಲ.
ಅಂತೆಯೇ ಗೊರೇಬಾಳ ನಾಡ ಕಚೇರಿಯ ಉಪತಹಸೀಲ್ದಾರ್ ಹನುಮಂತಪ್ಪ ಅವರನ್ನು ಗಂಗಾವತಿ ತಾಲೂಕಿನ ಕಾರಟಗಿ ನಾಡಕಚೇರಿಗೆ ಉಪತಹಸೀಲ್ದಾರಾಗಿ ವರ್ಗಾಯಿಸಲಾಗಿದೆ.
ಕಾರಟಗಿ ಉಪತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿರನ್ನು ಗಂಗಾವತಿ ತಾಲೂಕಿಗೆ ವರ್ಗಾಯಿಸಲಾಗಿದೆ. ಕಾರಟಗಿ ಗುಂಜಳ್ಳಿ ಹೋಬಳಿಯ ಕಿರಣಕುಮಾರ ಅವರನ್ನು ಹಗರಿಬೊಮ್ಮನಹಳ್ಳಿ ತಹಸೀಲ್ ಕಚೇರಿಯ ಶಿರಸ್ತೇದಾರರಾಗಿ ವರ್ಗಾಯಿಸಲಾಗಿದೆ.
ಆದರೆ ಸಿಂಧನೂರಿನ ತಹಸೀಲ್ದಾರ್ ಉಪತಹಸೀಲ್ದಾರ್ರನ್ನು ಬಿಡುಗಡೆ ಮಾಡದೆ ಅವರ ಪ್ರಭಾವಕ್ಕೆ ಒಳಗಾಗಿ ಮೌನಕ್ಕೆ ಶರಣಾಗಿದ್ದಾರೆ.
ವರ್ಗಾವಣೆಯಾಗಿರುವ ಹನುಮಂತಪ್ಪ ಮತ್ತು ಕಿರಣಕುಮಾರ ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ವಕೀಲರಾದ ಹನುಮಂತಪ್ಪ ಬೂದಿವಾಳ ಸೇರಿದಂತೆ ಮತ್ತಿತರರುಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.
---
'ಶಿಕ್ಷಣದ ಪಾತ್ರ ಮಹತ್ವದ್ದು'
ದೇವದುರ್ಗ: ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣದ ಕಲಿಕೆ ಮಹತ್ವದ ಪಾತ್ರವಹಿಸುತ್ತದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಮಹಾಂತೇಶ ಹೇಳಿದರು.ಭಾನುವಾರ ಪಟ್ಟಣದಲ್ಲಿ ಛಲವಾದಿ ಮಹಾಸಭಾದ ತಾಲೂಕ ಸಮಿತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡದ ಸರ್ಕಾರಿ ನೌಕಕರ ಬಡ್ತಿ ಮೀಸಲಾತಿ ಮಸೂದೆ ಕುರಿತ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಶಹಾಪುರದ ಸಾಹಿತಿ ದೇವೇಂದ್ರ ಹೆಗ್ಗಡೆ, ಸಿಪಿಐ ಡಾ. ಗಿರೀಶ್ ಬೋಜಣ್ಣನವರ್, ಎನ್.ಲಿಂಗಪ್ಪ ಜಾಲಹಳ್ಳಿ ಮತ್ತಿತರರು ಇದ್ದರು.