ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಸಿ ರಸ್ತೆ ಕಾಮಗಾರಿಗೆ ನಾಡಗೌಡ ಚಾಲನೆ

Lingaraj Badiger
Updated On : 11 Feb 2013, 11:22 am

ಸಿಂಧನೂರು: ತಾಲೂಕಿನ ಗಿಣಿವಾರ ಗ್ರಾಮದಲ್ಲಿ ಎಸ್‌ಸಿಪಿ ಯೋಜನೆ ಅಡಿಯಲ್ಲಿ 5 ಲಕ್ಷ ವೆಚ್ಚದ ಎಸ್‌ಸಿ ವಾರ್ಡಿನಲ್ಲಿ ಸಿಸಿ ರಸ್ತೆಗೆ ಶಾಸಕ ವೆಂಕಟರಾವ್ ನಾಡಗೌಡ ಶನಿವಾರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದು, ಈ ಗ್ರಾಮದ ಬಹು ದಿನಗಳ ಕನಸಾಗಿದ್ದ ಸಿಸಿ ರಸ್ತೆಗೆ ಚಾಲನೆ ನೀಡಿದ್ದೇನೆ. ಇದನ್ನು 6 ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದೆಂದು ಹೇಳಿದರು.ಇದೇ ವೇಳೆ ಎಪಿಎಂಸಿ ಸದಸ್ಯ ರಾಂಬಾಬು, ತಾಪಂ ಸದಸ್ಯ ಚಂದ್ರಭೂಪಾಲ ನಾಡಗೌಡ, ಚನ್ನಮ್ಮ, ಗ್ರಾಪಂ ಅಧ್ಯಕ್ಷ ಉಪ್ಪಳಪ್ಪ, ಸದಸ್ಯರಾದ ಗ್ಯಾನಪ್ಪ, ಉಪ್ಪಳಪ್ಪ, ಪ್ರಕಾಶ್, ಮುಖಂಡರಾದ ದೊಡ್ಡನಗೌಡ ಗಿಣಿವಾರ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಉದಯಗೌಡ, ಜೆ.ಇ. ಪ್ರಭು ಹುನಗುಂದ ಇದ್ದರು.ಸುವರ್ಣ ಗ್ರಾಮಕ್ಕೆ ಚಾಲನೆ
ಸಿಂಧನೂರು: ತಾಲೂಕಿನ ಅರಳಹಳ್ಳಿ ಗ್ರಾಮದಲ್ಲಿ 4ನೇ ಹಂತದ ಸುವರ್ಣ ಗ್ರಾಮ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ಮಾಡುವುದರ ಮೂಲಕ ಶಾಸಕ ಪ್ರತಾಪಗೌಡ ಚಾಲನೆ ನೀಡಿ ಶುಭ ಹಾರೈಸಿದರು. ಜೊತೆಗೆ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಸಮುದಾಯ ಭವನದ ಕಟ್ಟಡವನ್ನು ಉದ್ಘಾಟಿಸಿದರು. ಇದೇ ವೇಳೆ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಜಿಪಂ ಸದಸ್ಯೆ ಇಂದ್ರಮ್ಮ ಮಲ್ಲನಗೌಡ ಕನ್ನಾರಿ, ತಾಪಂ ಸದಸ್ಯೆ ಕಲಾವತಿ ಚಂದ್ರಶೇಖರ, ಗ್ರಾಪಂ ಅಧ್ಯಕ್ಷರಾದ ಚನ್ನಪ್ಪ ಪಂಪಾಪತಿ ಕಾರಟಗಿ, ಮಲ್ಲಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement