ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಎಸ್ಸಿ,ಎಸ್ಟಿ ಸಮಾವೇಶಕ್ಕೆ ಸಾವಿರಾರು ಕಾರ್ಯಕರ್ತರು

Lingaraj Badiger
Updated On : 12 Feb 2013, 11:27 am

ದೇವದುರ್ಗ: ಬಿಎಸ್ಸಾರ್ ಕಾಂಗ್ರೆಸ್ ಫೆ.13ರಂದು ಆಯೋಜಿಸಿರುವ ಎಸ್ಸಿ, ಎಸ್ಟಿ ರಾಜ್ಯ ಮಟ್ಟದ ಸಮಾವೇಶದಲ್ಲಿ  ತಾಲೂಕಿನ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಈ ಕುರಿತು ಜಿಲ್ಲಾ ಸಹ ಸಂಚಾಲಕ ನಾಗಪ್ಪ ಪಾಮರತಿ ಮತ್ತು ಯುವ ತಾಲೂಕು ಅಧ್ಯಕ್ಷ ಕೆ. ವೆಂಕಟೇಶ ಗೌಡ ಕೊತ್ತದೊಡ್ಡಿ ತಿಳಿಸಿದರು.
ಅವರು ಸೋಮವಾರ ಪಟ್ಟಣದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಎಸ್ಸಾರ್ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ನಾಡಿನಲ್ಲಿ ಅಭಿವೃದ್ಧಿ ಮೂಲಕ ಬದಲಾವಣೆ ತರುವಂತಹ ಶಕ್ತಿ ನಾಯಕ ಬಿ. ಶ್ರೀರಾಮುಲು ಅವರಿಗೆ ಮಾತ್ರ ಇದೆ. ಭವಿಷ್ಯದಲ್ಲಿ ಅವರು ರಾಜ್ಯದ ಜನತೆಗೆ ನ್ಯಾಯ ಒದಗಿಸುವಲ್ಲಿ, ಬಡ ಜನರತ್ತ ಅಂತಃಕರಣ ಹೊಂದಿದವರಾಗಿದ್ದಾರೆ.ಅವರನ್ನು ಮಂಚೂಣಿಗೆ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಸಹ ಸಂಚಾಲಕ ಜಯಪ್ಪಗೌಡ ಗಲಗ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸ್ಸನಗೌಡ ಜೆ. ಜಾಡಲದಿನ್ನಿ, ಬಿ. ಆಂಜನೇಯ್ಯ ನಾಯ್ಕ ನಾಡಗದಿನ್ನಿ, ರವೀಂದ್ರನಾಥ, ವಿಶ್ವನಾಥ ಪವಾರ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement