ಬಿಎಸ್ಆರ್ ಪಕ್ಷದ ಫ್ಲೆಕ್ಸ್ ತೆರವು: ಆಕ್ರೋಶ
ಲಿಂಗಸ್ಗೂರು: ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಬಿಎಸ್ಆರ್ ಕಾಂಗ್ರೆಸ್ನ ಫ್ಲೆಕ್ಸ್ಗಳನ್ನು ಪುರಸಭೆ ನೌಕರರು ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿನ ಸಾಥ್ಮೈಲ್ ಕ್ರಾಸ್ ಬಳಿ ಬಿಎಸ್ಆರ್ ಕಾಂಗ್ರೆಸ್ನಿಂದ ಫೆ.13 ರಂದು ನಡೆಯಲಿರುವ ಎಸ್ಸಿ, ಎಸ್ಟಿ ಸಮಾವೇಶಕ್ಕೆ ಪಕ್ಷದ ಯುವಘಟಕದ ರಾಜ್ಯ ಉಪಾಧ್ಯಕ್ಷ ಸಿದ್ಧುಬಂಡಿ ಅವರು ಸ್ವಾಗತ ಕೋರುವ ನಗರದ ವಿವಿಧೆಡೆ ಹಾಕಲಾದ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು.
ಪರವಾನಗಿ ಪಡೆಯದೆ ಇವುಗಳನ್ನು ಹಾಕಲಾಗಿದೆ ಎಂದು ಪುರಸಭೆ ಅಧಿಕಾರಿಗಳ ಸೂಚನೆ ಮೇರೆಗೆ ಸೋಮವಾರ ಸಂಜೆ ನೌಕರರು ತೆರವುಗೊಳಿಸಲು ಮುಂದಾಗುತ್ತಿದ್ದಂತೆ, ಮಾಹಿತಿ ತಿಳಿದ ಕಾರ್ಯಕರ್ತರು, ಪರವಾನಗಿ ಪಡೆದು ಹಾಕಲಾಗಿದೆ ಎಂದು ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಬಸ್ ನಿಲ್ದಾಣ ವೃತ್ತದ ಬಳಿ ಕಾರ್ಯಕರ್ತರು ಜಮಾವಣೆಗೊಂಡ ಮಾಹಿತಿ ದೊರೆತ ತಕ್ಷಣ ಪಿಎಸ್ಐ ಸಿದ್ಧರಾಮಯ್ಯ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಪೊಲೀಸ್ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗಿತ್ತು.